ಸಂಭ್ರಮ ಸಡಗರದಿಂದ ಜರುಗಿದ ಉಭಯ ಗವಾಯಿಗಳವರ ರಥೋತ್ಸವ

08GDG10(2)
Published on

ಗದಗ:
ನಗರದ ವಿರೇಶ್ವರ ಪುಣ್ಯಾಶ್ರಮದ ಪಂಚಾರ ಹಾಗೂ ಪುಟ್ಟರಾಜ ಗವಾಯಿಗಳವರ ರಥೋತ್ಸವ ಗುರುವಾರ ಭಕ್ತ ಸಾಗರದ ನಡುವೆ ಅದ್ದೂರಿಯಾಗಿ ಸಾಗಿತು. ರಥೋತ್ಸವದಲ್ಲಿ ಉಭಯ ಗವಾಯಿಗಳವರ ನಾಮಸ್ಮರಣೆಯೊಂದಿಗೆ ಭಕ್ತರು ಪಾಲ್ಗೊಂಡರು.
ಪಂಚಾರಿ ಗವಾಯಿಗಳವರ 79 ನೇ ಸ್ವರ ಸಮಾರಾಧನೆ ಹಾಗೂ ಪದ್ಮಭೂಷಣ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ 13 ನೇ ಪುಣ್ಯಾರಾಧನೆ ನಿಮಿತ್ತ ಜೂನ್​ 4 ರಿಂದ 8 ರವರೆಗೆ ಕಾರ್ಯಕ್ರಮ ಮತ್ತು ಜಾತ್ರಾ ಮಹೋತ್ಸವ ಜರುಗಿತು. ಕೊನೆಯ ದಿನವಾದ ಗುರುವಾರ ರಥೋತ್ಸವ ಜರುಗಿತು. ಜಿಲ್ಲೆ, ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು ರಥೋತ್ಸವ ಕಣ್ತುಂಬಿಕೊಂಡರು.
ಗುರುವಾರ ಬೆಳಗ್ಗೆಯಿಂದಲೂ ಪುಣ್ಯಾಶ್ರಮದಲ್ಲಿ ಪೂಜಾ ಕಂಕೈರ್ಯಗಳು ಜರುಗಿದವು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಪುಣ್ಯಾಶ್ರಮದ ನೂತನ ಮಹಾದ್ವಾರ ಭಕ್ತರ ಕಣ್ಮನ ಸೆಳೆಯಿತು. ಧರ್ಮೋತ್ತೇಜಕ ಮಹಾಸಭೆ ಜರುಗಿತು. ಸಂಜೆ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ವಿರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಸಮ್ಮುಖ ವಹಿಸಿದ್ದರು. ತೋಂಟದ ಶ್ರೀಗಳು ಹಾಗೂ ಧಾರವಾಡದ ಮುರುಘಾ ಶರಣರು ಸಾನ್ನಿಧ್ಯ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net