ವೀರೇಶ್ವರ ಪುಣ್ಯಾಶ್ರಮದಲ್ಲಿ ಸುಗಮ ಸಂಗೀತ, ಜಾನಪದ ಸಂಗೀತ ಕಾರ್ಯಕ್ರಮ

30GDG04
ಗದಗ ವಿರೇಶ್ವರ ಪುಣ್ಯಾಶ್ರಮದಲ್ಲಿ ಏರ್ಪಡಿಸಿದ್ದ ಸಂಗಿತ ಕಾರ್ಯಕ್ರಮವನ್ನು ಕಲ್ಲಯ್ಯಜ್ಜನವರು ಉದ್ಘಾಟಿಸಿದರು. ಬೆಟದಯ್ಯ ಶಾಸ್ತ್ರಿ ಹಿರೇಮ್ಯಾಗೇರಿ, ವೀರೇಶ ಗವಾಯಿ ಹಿರೇಮಠ, ಬಸವಲಿಂಗಯ್ಯ ಹಿರೇಮಠ, ವೀರಭದ್ರಪ್ಪ ಬೆಣಕಲ್​ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ವೀರೇಶ್ವರ ಪುಣ್ಯಾಶ್ರಮ ನಾಡಿನ ಅಂಧ, ಅನಾಥ, ವಿಕಲಚೇತನ ಮಕ್ಕಳಿಗೆ ಅನ್ನದಾಸೋಹ, ಸಂಗೀತ&ಜ್ಞಾನ ದಾಸೋಹ ನೀಡುವ ಮೂಲಕ ಅವರಲ್ಲಿ ಚೈತನ್ಯ ತುಂಬಿ ಸ್ವಾವಲಂಭಿ ಬದುಕು ರೂಪಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ವೀರೇಶ್ವರ ಪುಣ್ಯಾಶ್ರಮ ಪೀಠಾಧಿಪತಿ ಡಾ. ಕಲ್ಲಯ್ಯಜ್ಜನವರು ಅಭಿಪ್ರಾಯಪಟ್ಟರು.
ರವಿವಾರ ನಗರದ ವೀರೇಶ್ವರ ಪುಣ್ಯಾಶ್ರಮದ ಗುರು ಪುಟ್ಟರಾಜ ಕಲಾಭವನದಲ್ಲಿ ಗಾನಯೋಗಿ ಡಾ.ಪಂ.ಪುಟ್ಟರಾಜ ಸೇವಾ ಸಮಿತಿ ಗದಗ, ಕನ್ನಡ ಮತ್ತು ಸಂಸತಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಸುಗಮ ಸಂಗೀತ, ಜಾನಪದ ಸಂಗೀತ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವೀರೇಶ್ವರ ಪುಣ್ಯಾಶ್ರಮದ ಅಂಧರ ಬಾಳಿಗೆ ಬೆಳಕಾಗಿದೆ ಎಂದರು.
ಸಂಗೀತ, ಸಾಹಿತ್ಯ, ಶಿಣ, ಧಾಮಿರ್ಕ ೇತ್ರಕ್ಕೆ ವೀರೇಶ್ವರ ಪುಣ್ಯಾಶ್ರಮ ಅನುಪಮ ಸೇವೆ ಸಲ್ಲಿಸಿದೆ. ಆಶ್ರಮದಲ್ಲಿ ಗುರುಗಳಾದ ಪಂಚಾರ ಗವಾಯಿಗಳವರ, ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳವರ ಶಿಷ್ಯತ್ವ ಪಡೆದು ಅವರ ಮಾರ್ಗದರ್ಶನದಲ್ಲಿ ಸಂಗೀತ ವಿದ್ಯಾಭ್ಯಾಸ ಮಾಡಿದ ಸಾವಿರಾರು ಕಲಾವಿದರು ಉನ್ನತ ಹುದ್ದೆಯಲ್ಲಿ, ಉನ್ನತ ಸಾಧನೆ ಮಾಡಿದ ಮಹಾನ್​ ಕಲಾವಿದರಾಗಿ ಭವ್ಯ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ ಎಂದರು.
ವೀರೇಶ್ವರ ಪುಣ್ಯಾಶ್ರಮದ ವ್ಯವಸ್ಥಾಪಕ ಹೇಮರಾಜ ಶಾಸ್ತ್ರಿ ಹೆಡಿಗ್ಗೊಂಡ, ಗಾನಯೋಗಿ ಡಾ.ಪಂ.ಪುಟ್ಟರಾಜ ಸೇವಾ ಸಮಿತಿಯ ಅಧ್ಯ ಸಿದ್ಧೇಶ್ವರ ಶಾಸ್ತ್ರಿ ತೆಲ್ಲೂರ, ಸಮಿತಿಯ ಸದಸ್ಯರಾದ ಎಂ.ಜಿ.ಗುರುಸಿದ್ಧೇಶ್ವರ ಶಾಸ್ತ್ರಿ ಬೇವೂರ, ಶರಣಯ್ಯ ಶಾಸ್ತ್ರಿ ಅಗಸಬಾಳ, ಸಂಗಮೇಶ ಕರಡಕಲ್​ ವಿರೇಶ್ವರ ಪುಣ್ಯಾಶ್ರಮ ಕುರಿತು ಮಾತನಾಡಿದರು.
ಬೆಟದಯ್ಯ ಶಾಸ್ತ್ರಿ ಹಿರೇಮ್ಯಾಗೇರಿ, ವೀರೇಶ ಗವಾಯಿ ಹಿರೇಮಠ, ಬಸವಲಿಂಗಯ್ಯ ಹಿರೇಮಠ, ವೀರಭದ್ರಪ್ಪ ಬೆಣಕಲ್​ ತಂಡದಿಂದ ಜಾನಪದ ಹಾಗೂ ಸುಗಮ ಸಂಗೀತ ಜರುಗಿತು. ಶರಣಬಸವ ಶಾಸ್ತ್ರಿ ಇಲಕಲ್ಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net