ಡಿಸೆಂಬರ್ ನಲ್ಲಿ ವೀರಶೈವ ಮಹಾಸಭಾಗೆ ಚುನಾವಣೆ

Press Meet
Published on

ಮಂಡ್ಯ: ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲೆ ಮತ್ತು ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆಗೆ ಡಿ.27ರಂದು ಮತದಾನ ನಡೆಯಲಿದೆ ಎಂದು ಮಹಾಸಭಾದ ಚುನಾವಣಾಧಿಕಾರಿ ಎಚ್.ಎಂ.ರೇಣುಕ ಪ್ರಸನ್ನ ತಿಳಿಸಿದರು.
ಡಿ.12ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. 15ರಂದು ಮಧ್ಯಾಹ್ನ 3ರವರೆಗೆ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು, 16ರಂದು ನಾಮಪತ್ರ ಪರಿಶೀಲನೆ, 19ರಂದು ನಾಮಪತ್ರ ವಾಪಾಸ್ ಪಡೆಯಲು ಅಂತಿಮ ದಿನವಾಗಿದೆ. ಈಗಾಗಲೇ ರಾಜ್ಯ ಮಟ್ಟದ ಸಮಿತಿಗೆ ಚುನಾವಣೆ ನಡೆದಿದೆ. ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರಗಳಲ್ಲಿ ಚುನಾವಣೆ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪದಾಧಿಕಾರಿಗಳಾದ ಸಾಗನಹಳ್ಳಿ ನಟರಾಜು, ನಂಜುಂಡೇಶ್, ಸಿದ್ದಲಿಂಗಯ್ಯ ಬನ್ನಂಗಾಡಿ, ಸುಬ್ರಹ್ಮಣ್ಯ, ಧನಂಜಯ, ಗಂಗಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net