'ವೀರಶೈವ ಧರ್ಮ ಸರ್ವಶ್ರೇಷ್ಠ ಧರ್ಮ'

'Veerashaivism is the supreme religion'
Published on

ಕುಶಾಲನಗರ:

ವಿಶ್ಚದಲ್ಲಿಯೇ ವೀರಶೈವ ಧರ್ಮ ಸರ್ವಶ್ರೇಷ್ಠ ಧರ್ಮವಾಗಿದ್ದು, ಎದೆಯ ಮೇಲೆ ಲಿಂಗ ಧರಿಸುವ ಪ್ರತಿಯೊಬ್ಬನೂ ಹೃದ್ರೋಗದಿಂದ ದೂರವಾಗಬಹುದು ಎಂದು ಅರಸೀಕೆರೆ ತಾಲೂಕು ಕೋಡಿ ಮಠ ಸಂಸ್ಥಾನದ ಶ್ರಿ ಶಿವಾನಂದ ಶಿವಯೋಗಿ ಮಹಾಸ್ವಾಮೀಜಿ ಹೇಳಿದರು. ತೊರೆನೂರು ಗ್ರಾಮದಲ್ಲಿ ಶುಕ್ರವಾರ ಪೂಜಾ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ನಂತರ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಅವರು, ವೀರಶೈವ ಧರ್ಮ ಪ್ರಕೃತಿ ಧರ್ಮವಾಗಿದೆ. ವೀರಶೈವ ಧರ್ಮಕ್ಕೆ ಜಾತಿಯ ಸಂಕೋಲೆ ಇಲ್ಲ.

ಮಿಗೆಯಗಲ, ಮುಗಿಲಗಲ, ಅಪ್ರತಿಮ, ಅಗೋಚರವಾದ ‘ಲಿಂಗ’ ವನ್ನು ಪ್ರತಿಯೊಬ್ಬರು ಧಾರಣೆ ಮಾಡಬೇಕು. ಮುಂಜಾನೆ ಹಾಗೂ ಮುಸ್ಸಂಜೆ ಕರದಲ್ಲಿ ಹಿಡಿದು ಪೂಜಿಸಿದಲ್ಲಿ ಕಣ್ಣಿನ ದೃಷ್ಟಿಯ ಮೂಲಕ ಮನುಷ್ಯನ ದೇಹಕ್ಕೆ ಆವಾಹಿಸುವ ಅವ್ಯಕ್ತ ಶಕ್ತಿ ದೇಹದಲ್ಲಿನ ರೋಗಗಳನ್ನು ದೂರ ಮಾಡುತ್ತದೆ.

ಹೃದಯಕ್ಕೆ ಶುದ್ಧ ಆಮ್ಲಜನಕವನ್ನು ಪೂರೈಸಿ ಹೃದಯವಂತನಾಗಿಸುತ್ತದೆ ಎಂದು ಶ್ರೀಗಳು ವಿಶ್ಲೇಷಿಸಿದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎಸ್. ಮೂರ್ತಿ, ಪ್ರಮುಖರಾದ ಶಾಂಭಶಿವಮೂರ್ತಿ ಮತ್ತಿತರರು ಈ ವೇಳೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net