

ಹುಬ್ಬಳ್ಳಿ : ಅಖಿಲ ಕರ್ನಾಟಕ ವೀರಶೈವ ಆದಿಬಣಜಿಗ ಕಲ್ಯಾಣ ಸಮಿತಿ ವತಿಯಿಂದ ವೀರಶೈವ ಲಿಂಗಾಯತ ಬಣಜಿಗ, ಆದಿ ಬಣಜಿಗ, ಪಂಚಮಸಾಲಿ ಸಮಾಜಗಳ ರಾಜ್ಯಮಟ್ಟದ ವಧು-ವರರ ಸಮಾವೇಶವನ್ನು ಆ. 13ರಂದು ಬೆಳಗ್ಗೆ 10 ಗಂಟೆಯಿಂದ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠದ ನಿರಂಜನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಸಮಾಜದ ವೈದ್ಯರು, ವ್ಯಾಪಾರಸ್ಥರು, ಇಂಜಿನಿಯರ್ಗಳು, ಸರ್ಕಾರಿ-ಖಾಸಗಿ ಕ್ಷೇತ್ರಗಳ ನೌಕರರು ಹಾಗೂ ಇತರರು ಪಾಲ್ಗೊಳ್ಳುವರು. ಆಸಕ್ತರು ವೈಯಕ್ತಿಕ ವಿವರಗಳುಳ್ಳ ಪರಿಚಯಪತ್ರ ಹಾಗೂ ಭಾವಚಿತ್ರಗಳೊಂದಿಗೆ ಪಾಲ್ಗೊಳ್ಳಬಹುದು ಎಂದು ಸಮಿತಿ ಅಧ್ಯಕ್ಷ ಸದಾಶಿವ ಕಾರಡಗಿ ತಿಳಿಸಿದ್ದಾರೆ.