

ಮಂಡ್ಯ: ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷರಾಗಿ ಪಾಂಡವಪುರ ತಾಲೂಕು ತಾಳಶಾಸನದ ಎಸ್.ಆನಂದ್ ಅವರು ಆಯ್ಕೆಯಾಗಿದ್ದಾರೆ.
2024-25 ರಿಂದ 2028-29ನೇ ಸಾಲಿನ ಆಡಳಿತ ಮಂಡಳಿ ಆಯ್ಕೆಗೆಂದು ಭಾನುವಾರ ನಡೆದ ಚುನಾವಣೆಯಲ್ಲಿ ಆನಂದ್ ಅವರ ಬಣ ಜಯಭೇರಿ ಬಾರಿಸಿದೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಂ.ಎ.ಅರುಣ್‌ಕುಮಾರ್, ಎನ್.ಎಸ್.ಈರಪ್ಪ, ಕೆ.ಎಸ್.ಗಂಗಾಧರ, ಎ.ಎಂ.ಈರಣ್ಣ, ಶಿವಪ್ಪ, ಜಗದೀಶ್, ಬಿ.ಎಸ್.ಗಿರೀಶ್, ಮಹದೇವಸ್ವಾಮಿ, ಬಿ.ಎಸ್.ಮಹೇಶ್, ಮಹೇಶ್, ಎಸ್.ಸಿ.ಚಂದ್ರಶೇಖರ, ಗುರುಮಲ್ಲೇಶ, ಎಸ್.ಸಿ.ಜಗದೀಶ್, ಬಿ.ವಿ.ಮಂಜುನಾಥ, ಎಚ್.ಎಸ್.ಸುರೇಶ, ವಿಶ್ವೇಶ್ವರಯ್ಯ, ಆರ್.ಬಿ.ಮಹದೇವಸ್ವಾಮಿ, ಬಿ.ಎಸ್.ಶಿವಣ್ಣ, ಆರ್.ಗಂಗಾಧರಸ್ವಾಮಿ, ಬಿ.ಡಿ.ಚಂದ್ರಶೇಖರ, ಮಹಿಳಾ ಮೀಸಲು ಕ್ಷೇತ್ರದಿಂದ ಕಾರ್ಯಕಾರಿ ಸಮಿತಿ ಸದಸ್ಯರಾಗಿ- ಆರ್.ಎಸ್.ಕಲ್ಪನಾ, ಇಂದ್ರಮ್ಮ, ವಿ.ಅನಿತಾ, ಬಿ.ಎಸ್.ಪದ್ಮಾ, ಟಿ.ಎನ್.ನಯನಾ, ವಿಶಾಲಾಕ್ಷಿ, ಎಂ.ರತ್ನಮ್ಮ, ಕೆ.ಎಂ.ಮಹದೇವಮ್ಮ, ಶೋಭಾ, ಬಿ.ಎಸ್.ದೀಪಾ ಅವರು ಚುನಾಯಿತರಾಗಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೂತನ ಜಿಲ್ಲಾಧ್ಯಕ್ಷ ಎಸ್.ಆನಂದ್, ವೀರಶೈವ ಮಹಾಸಭಾ ಮಂಡ್ಯ ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಬಲಿಷ್ಠವಾಗಿದೆ. ಜಿಲ್ಲೆಯಲ್ಲಿ ಮಹಾಸಭಾವನ್ನು ಸದೃಢಗೊಳಿಸಲು ಸಮರ್ಥವಾದ ನಾಯಕರ ಅವಶ್ಯಕತೆ ಇದ್ದು, ಅದಕ್ಕೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಕೇಂದ್ರ ಸೇರಿದಂತೆ ತಾಲೂಕುಗಳಲ್ಲಿ ಬಸವ ಭವನ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕು. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವೇಶ್ವರರ ಭಾವಚಿತ್ರ ಅಳವಡಿಸುವಂತೆ ಸರ್ಕಾರ ಆದೇಶ ಹೊರಡಿಸಿದ್ದರೂ ಇದು ಸರಿಯಾಗಿ ಪಾಲನೆ ಆಗುತ್ತಿಲ್ಲ. ಎಲ್ಲ ಸರ್ಕಾರಿ ಕಚೇರಿಗಳಲ್ಲೂ ಕಡ್ಡಾಯವಾಗಿ ಬಸವೇಶ್ವರರ ಭಾವಚಿತ್ರವನ್ನು ಅಳವಡಿಸದೇ ಇದ್ದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, ಮಹಾಸಭಾದ ಸಹಯೋಗದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ಎಲ್ಲ ತಾಲೂಕಿನಲ್ಲೂ ವೀರಶೈವ ವಿದ್ಯಾರ್ಥಿಗಳಿಗೆ ವಸತಿ ತೆರೆಯುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ನೂತನ ಆಡಳಿತ ಮಂಡಳಿಯ ಶಿವಕುಮಾರ್, ಬುಳ್ಳಪ್ಪ, ದೇವರಾಜು ಇತರರಿದ್ದರು.