ವೀರಶೈವ ಮಹಾಸಭೆ ಚುನಾವಣೆ ಪ್ರಕ್ರಿಯೆ ಶುರು

Veerashaiva Mahasabha election process has started
Published on

ಹಾನಗಲ್ಲ: ಅಖಿಲ ಭಾರತ ವೀರಶೈವ ಮಹಾಸಭೆಯ ಹಾನಗಲ್ಲ ತಾಲೂಕು ಘಟಕದ ಚುನಾವಣೆ ಪ್ರಕ್ರಿಯೆ ಜೂ. 27ರಿಂದ ಆರಂಭವಾಗಿದ್ದು, ಜು. 21ರಂದು ಕಾರ್ಯನಿರ್ವಾಹಕ ಸಮಿತಿಯ 20 ಸ್ಥಾನಗಳಿಗೆ ಚುನಾವಣೆ ಜರುಗಲಿದೆ ಎಂದು ಚುನಾವಣಾಧಿಕಾರಿ ಕಲ್ಯಾಣಕುಮಾರ ಶೆಟ್ಟರ ತಿಳಿಸಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ತಾಲೂಕಿನಲ್ಲಿ ವೀರಶೈವ ಮಹಾಸಭೆಯ 359 ಸದಸ್ಯರಿದ್ದು, ಕಾರ್ಯನಿರ್ವಾಹಕ ಸಮಿತಿಗೆ 20 ಸದಸ್ಯರನ್ನು ಆಯ್ಕೆ ಮಾಡಬೇಕಾಗಿದೆ. ಇದರಲ್ಲಿ 7 ಮಹಿಳೆಯರಿಗೆ ಸದಸ್ಯರಾಗಲು ಅವಕಾಶವಿದೆ. ಇದರೊಂದಿಗೆ ಒಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಕಾರ್ಯನಿರ್ವಾಹಕ ಸಮಿತಿ ಸ್ಥಾನದ ಅಭ್ಯರ್ಥಿಗಳಿಗೆ ಒಬ್ಬ ಸೂಚಕರು, ಐವರು ಅನುಮೋದಕರಾಗಿ ಸದಸ್ಯರು ಸಹಿ ಹಾಕಬೇಕು. ಅಧ್ಯಕ್ಷ ಸ್ಥಾನಕ್ಕೆ ಒಬ್ಬ ಸೂಚಕರು, 10 ಜನ ಅನುಮೋದಕರು ಸಹಿ ಹಾಕಬೇಕು. ನಾಮಪತ್ರ ಸಲ್ಲಿಕೆಗೆ ಜು. 4 ಕೊನೆಯ ದಿನವಾಗಿದೆ ಎಂದರು.

ಹಾನಗಲ್ಲ ವಿರಕ್ತಮಠದ ವ್ಯವಸ್ಥಾಪಕರ ಕಚೇರಿಯಲ್ಲಿ ಮಹಾಸಭಾ ಚುನಾವಣಾ ಕಚೇರಿ ತೆರೆಯಲಾಗಿದೆ. ರಜಾ ದಿನಗಳನ್ನು ಹೊರತುಪಡಿಸಿ, ಬೆಳಗ್ಗೆ 10.30 ರಿಂದ 3 ಗಂಟೆಯವರೆಗೆ ಕಚೇರಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.

ಉಪ ಚುನಾವಣಾಧಿಕಾರಿಗಳಾದ ಮಾಲತೇಶ ಸೊಪ್ಪಿನ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಶಾಂತಪ್ಪ ತಿಪಲಾಪುರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net