ಅಖಿಲ ಭಾರತ ವೀರಶೈವ ಮಹಾಸಭಾ ಚುನಾವಣೆ; ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಜಿದ್ದಾಜಿದ್ದಿ ಜೋರು

15 Dwd 5C
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಜಿದ್ದಾಜಿದ್ದಿ ಜೋರಾಗಿದೆ. ಪ್ರತಿಷ್ಠಿತ ಸಮಾಜದ ಪ್ರಾತಿನಿಽಕ ಸಂಸ್ಥೆಯಲ್ಲೂ ರಾಜಕೀಯ ನುಸುಳಿದ್ದು, ಕಾಂಗ್ರೆಸ್- ಬಿಜೆಪಿ ಶಾಸಕರಿಬ್ಬರು ಒಗ್ಗಟ್ಟಾಗಿದ್ದಾರೆ.
ಜಿಲ್ಲಾ ಅಧ್ಯಕ್ಷ ಸ್ಥಾನಕ್ಕಾಗಿ ಗುರುರಾಜ ಹುಣಸಿಮರದ, ಸಿದ್ದಪ್ಪ ಕಂಬಾರ, ಶಿವಶಂಕರ ಹಂಪಣ್ಣವರ, ಪ್ರದೀಪಗೌಡ ಪಾಟೀಲ ಹಾಗೂ ಮಹೇಶ ಬೆಲ್ಲದ ಕಣಕ್ಕಿಳಿದಿದ್ದರು. ಆದರೆ, ಶಾಸಕರಾದ ವಿನಯ ಕುಲಕರ್ಣಿ ಹಾಗೂ ಅರವಿಂದ ಬೆಲ್ಲದ ಮಧ್ಯಸ್ಥಿಕೆ ವಹಿಸಿ ಪ್ರದೀಪಗೌಡ ಪಾಟೀಲ ಅವರನ್ನು ಒಮ್ಮತದ ಅಭ್ಯರ್ಥಿ ಮಾಡಿದ್ದಾರೆ. ಹೀಗಾಗಿ ಶಾಸಕ ಬೆಲ್ಲದ ಅವರ ಸಂಬ0ಧಿ ಮಹೇಶ ಬೆಲ್ಲದ, ಗಣ್ಯ ವರ್ತಕ ಹಾಗೂ ಕೆಪಿಸಿಸಿ ಸದಸ್ಯ ಶಿವಶಂಕರ ಹಂಪಣ್ಣವರ ಕಣದಿಂದ ಹಿಂದೆ ಸರಿದು, ಪ್ರದೀಪಗೌಡ ಅವರನ್ನು ಬೆಂಬಲಿಸಿದ್ದಾರೆ. ತ್ರಿಕೋನ ಸ್ಪರ್ಧೆ ಇದ್ದರೂ ಗುರುರಾಜ ಮತ್ತು ಪ್ರದೀಪಗೌಡ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಪ್ರದೀಪಗೌಡ ಪಾಟೀಲ ವಿನಯ ಕುಲಕರ್ಣಿ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಆದರೂ ಶಾಸಕ ಬೆಲ್ಲದ ಅವರ ಬೆಂಬಲಕ್ಕೆ ನಿಂತಿದ್ದಾರೆ. ಇಬ್ಬರೂ ಶಾಸಕರು ಪ್ರದೀಪಗೌಡರನ್ನು ಬೆಂಬಲಿಸುವAತೆ ಮಹಾಸಭಾದ ಸದಸ್ಯರಲ್ಲಿ ಮನವಿ ಮಾಡುತ್ತಿರುವ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಜು. 21ರಂದು ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಮಹಾಸಭಾದ ಲಿಂಗಾಯತ ಭವನದಲ್ಲಿ ಮತದಾನ, ನಂತರ ಎಣಿಕೆ ಹಾಗೂ ಫಲಿತಾಂಶ ಹೊರಬೀಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net