ವಿಜಯವಾಣಿ ಸುದ್ದಿಜಾಲ ಮಂಗಳೂರು
ಮಠಗಳು, ಸಮುದಾಯ ಸಂಘಟನೆಗಳು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳುವ ಮೂಲಕ ಸಮುದಾಯದ ಅಭ್ಯುದಯದಲ್ಲಿ ಪ್ರಧಾನ ಪಾತ್ರ ವಹಿಸಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಮಹಾದೇವ ಬಿದರಿ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಬೆಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಘಟಕ ವತಿಯಿಂದ ನಗರದ ಉರ್ವಸ್ಟೋರ್ ಶ್ರೀ ವಿಶ್ವಗುರು ಜಗಜ್ಯೋತಿ ಬಸವೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ ಸೇವಾ ದೀಕ್ಷಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ವೀರರಾಣಿ ಕೆಳದಿ ಚೆನ್ನಮ್ಮ ಅಧಿಕಾರದ ಅವಧಿಯಲ್ಲಿ ಕರಾವಳಿಯ ಕುಂದಾಪುರದಿಂದ ಕೇರಳದ ಕಾಸರಗೋಡು ತನಕ ಸಮಾಜದ 108 ಮಠಗಳಿದ್ದು, ಇವುಗಳಲ್ಲಿ ಅನೇಕ ನಶಿಸಿಹೋಗಿವೆ. ಮಠಗಳು ಭಕ್ತರಿಗಾಗಿಯೇ ಇವೆ. ಅಳಿದುಳಿದಿರುವ ಸಮಾಜದ ಮಠಗಳ ಸಂರಕ್ಷಣೆ ಮತ್ತು ಅವುಗಳನ್ನು ಹೆಚ್ಚು ಕ್ರೀಯಾಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಜಗಜ್ಯೋತಿ ಬಸವೇಶ್ವರ ಸಮುದಾಯ ಭವನದ ಕಾಮಗಾರಿ ವರ್ಷದೊಳಗೆ ಪೂರ್ಣಗೊಳ್ಳಬೇಕು ಎಂದು ಕಾಲಮಿತಿ ಸೂಚಿಸಿದ ಅವರು, ಕಾಮಗಾರಿಗೆ ತಮ್ಮ ವೈಯುಕ್ತಿಕ ಕೊಡುಗೆ ಒಂದು ಲಕ್ಷ ರೂ. ನಗದು ಕೊಡುಗೆಯನ್ನು ೋಷಿಸಿದರು. ಸಂಘಟನೆಗೆ ಸೇವೆ ಸಲ್ಲಿಸಲು ಬದ್ದರಾದ ಸಮಾಜ ಬಾಂಧವರಿಗೆ ಅವರು ಸೇವಾ ದೀಕ್ಷೆ ನೀಡಿದರು.
ಪ್ರತೀ ತಾಲೂಕಿನಲ್ಲಿ 10 ಸಾವಿರ ಗುರಿ
ಅಭಾವೀಮ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ನಟರಾಜ್ ಸಾಗರನಹಳ್ಳಿ ಅವರು ಮಾತನಾಡಿ, ರಾಜ್ಯದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ 2.20 ಲಕ್ಷ ಸದಸ್ಯರಿದ್ದು, ಪ್ರತೀ ತಾಲೂಕಿನಲ್ಲಿ 10 ಸಾವಿರ ಸದಸ್ಯರನ್ನು ನೋಂದಣಿ ಮಾಡಿಕೊಳ್ಳುವ ಗುರಿ ಇರಿಸಿಕೊಳ್ಳಲಾಗಿದೆ. ಉದ್ಯೋಗ, ಶಿಕ್ಷಣ ಸಹಿತ ವಿವಿಧ ಉದ್ದೇಶಗಳಿಂದ ಇತರ ಪ್ರದೇಶಗಳಿಂದ ಆಗಮಿಸಿ ನೆಲೆಸಿರುವ ಸುಮಾರು 50 ಸಾವಿರ ಸಮಾಜಬಾಂಧವರು ಮಂಗಳೂರಿನಲ್ಲಿ ಇದ್ದಾರೆ ಎಂದು ಹೇಳಿದರು.
ಅಭಾವೀಮ ದಕ ನಿಯೋಜಿತ ಅಧ್ಯಕ್ಷ ಬಸವರಾಜು ಗಗನ್ ಅವರು ಮಾತನಾಡಿ, ಹಿರಿಯರ ಮಾರ್ಗದರ್ಶನದಲ್ಲಿ ಸಂಘಟನೆ ಬಲಪಡಿಸುವ ಪ್ರಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.
ಜಿಲ್ಲಾ ಮಟ್ಟದಲ್ಲಿ ಸಂಘಟನೆ ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ ಅಭಾವೀಮ ರಾಜ್ಯ ಘಟಕದ ಉಪಾಧ್ಯಕ್ಷೆ ರಾಜೇಶ್ವರಿ ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕರಾವಳಿ ವೀರಶೈವ ಕ್ಷೇಮಾಭಿವೃದ್ಧಿ ಸಂಘ ಮಂಗಳೂರು ಎಚ್.ಎಸ್. ಗುರುಮೂರ್ತಿ ಅವರು, ಸಮಾಜದ ಒಗ್ಗಟ್ಟು, ಅಭಿವೃದ್ಧಿಯ ದ್ಯೋತಕವಾಗಿ ಸಂಘಟನೆ ಬಲಗೊಳ್ಳುತ್ತಿದೆ. ಸಮುದಾಯ ಭವನ ಶೀಘ್ರದಲ್ಲೇ ಸಮರ್ಪಣೆಗೊಳ್ಳಲಿದೆ ಎಂದರು.
ಎಂಆರ್‌ಪಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಸುದರ್ಶನ್, ಮಹಾನಗರ ಪಾಲಿಕೆಯ ನಿವೃತ್ತ ಹಿರಿಯ ಆರೋಗ್ಯ ನಿರೀಕ್ಷಕ ಆರ್.ಎಂ.ಬಸವರಾಜ್, ಕರಾವಳಿ ವೀರಶೈವ ಲಿಂಗಾಯುತ ಕೋಓಪರೇಟಿವ್ ಸೊಸೈಟಿ ಮಂಗಳೂರು ಅಧ್ಯಕ್ಷ ಕೆ.ಚೆನ್ನಯ್ಯ ಸ್ವಾಮಿ ಉಪಸ್ಥಿತರಿದ್ದರು.
ಚೆನ್ನಬಸಪ್ಪ ಸ್ವಾಗತಿಸಿದರು.
ೆಟೋ
ಎಂಎನ್‌ಜಿ- ೆಬ್ 24- ಸಮುದಾಯ ಭವನ
ಮಂಗಳೂರು ಶ್ರೀ ವಿಶ್ವಗುರು ಜಗಜ್ಯೋತಿ ಬಸವೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ ಸೇವಾ ದೀಕ್ಷಾ ಸಮಾರಂಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಮಹಾದೇವ ಬಿದರಿ, ಅಭಾವೀಮ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ನಟರಾಜ್ ಸಾಗರನಹಳ್ಳಿ, ಅಭಾವೀಮ ದಕ ನಿಯೋಜಿತ ಅಧ್ಯಕ್ಷ ಬಸವರಾಜು ಗಗನ್, ಅಭಾವೀಮ ರಾಜ್ಯ ಘಟಕದ ಉಪಾಧ್ಯಕ್ಷೆ ರಾಜೇಶ್ವರಿ ನಾಗರಾಜ್, ಕರಾವಳಿ ವೀರಶೈವ ಕ್ಷೇಮಾಭಿವೃದ್ಧಿ ಸಂಘ ಮಂಗಳೂರು ಎಚ್.ಎಸ್. ಗುರುಮೂರ್ತಿ, ಎಂಆರ್‌ಪಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಸುದರ್ಶನ್, ಮಹಾನಗರ ಪಾಲಿಕೆಯ ನಿವೃತ್ತ ಹಿರಿಯ ಆರೋಗ್ಯ ನಿರೀಕ್ಷಕ ಆರ್.ಎಂ.ಬಸವರಾಜ್, ಕರಾವಳಿ ವೀರಶೈವ ಲಿಂಗಾಯುತ ಕೋಓಪರೇಟಿವ್ ಸೊಸೈಟಿ ಮಂಗಳೂರು ಅಧ್ಯಕ್ಷ ಕೆ.ಚೆನ್ನಯ್ಯ ಸ್ವಾಮಿ ಉಪಸ್ಥಿತರಿದ್ದರು.