

ವಿಜಯವಾಣಿ ಸುದ್ದಿಜಾಲ ಗದಗ
ಅಖಿಲ ಭಾರತ ಜಂಗಮ ಸೇವಾ ಸಮಿತಿಯ ಧೇಯೋದ್ದೇಶಗಳನ್ನು ಗಮಿಸಿದರೆ ವೀರಶೈವ ಲಿಂಗಾಯತ ಧರ್ಮದ ಎಲ್ಲ ಲಣಗಳು ಗೋಚರವಾಗುತ್ತವೆ ಎಂದು ಮುಂಡರಗಿ ಅನ್ನದಾನೀಶ್ವರ ಸಂಸ್ಥಾನಮಠದ ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳು ಹೇಳಿದರು.
ಬೆಟಗೇರಿಯಲ್ಲಿ ನಡೆದ ಅಖಿಲ ಭಾರತ ಜಂಗಮ ಸೇವಾ ಸಮಿತಿ ಉದ್ಘಾಟನಾ ಸಮಾರಂಭದ ನಿಮಿತ್ಯ ಜಂಗಮ ವಟುಗಳಿಗೆ ಅಯ್ಯಾಚಾರ ಹಾಗೂ ಭಕ್ತರಿಗೆ ಶಿವದೀೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ ಅವರು, ವೀರಶೈವ ಧರ್ಮ ತತ್ವ&ನಿಷ್ಟೆಯಿಂದ ಕೂಡಿದೆ. ವೀರಶೈವ ಲಿಂಗಾಯತ ಬೇರೆಯಲ್ಲ. ಹಾಗಾಗಿ ಈ ವಿಚಾರದ ಕಂದಕ ಕಡಿಮೆ ಆಗಬೇಕಾಗಿದೆ. ಮುಂದೆ ಜಾತಿ ಸಮೀೆ ಬಂದಾಗ ವೀರಶೈವ ಲಿಂಗಾಯತ ಎಂದು ನಮೋಧಿಸಬೇಕು. ಇಂದಿನ ದಿನಗಳಲ್ಲಿ ಸಂಸ್ಕಾರ, ಆಚಾರ ವಿಚಾರ ಕಡಿಮೆಯಾಗುತ್ತಿದೆ. ಜಂಗಮರು ಎದೆಯ ಮೇಲೆ ಲಿಂಗವನ್ನು ಅಳವಡಿಸಿಕೊಳ್ಳಬೇಕು. ಲಿಂಗ ಹಾಕಿಕೊಳ್ಳದಿದ್ದರೆ ಲಿಂಗವಂತ ಆಗಲಾರರು. ಜಂಗಮರು ಸಾಧನೆಯಿಂದ ಸಮಾಜಕ್ಕೆ ಕೊಡುಗೆ ನೀಡುತ್ತಾ ಬಂದಿದ್ದಾರೆ. ಜಂಗಮರು ಸಚ್ಚಾರಿತ್ರ್ಯವಂತರಾಗಬೆಕು. ವೀರಶೈವ ಧರ್ಮ ವ್ಯಕ್ತಿನಿಷ್ಠೆ ಅಲ್ಲ, ಅದು ತತ್ವನಿಷ್ಟೆ ಧರ್ಮವಾಗಿದೆ. ಹೀಗಾಗಿ ಜಂಗಮ ಸೇವಾ ಸಮಿತಿಯಿಂದ ಸಮಾಜಕ್ಕೆ ಒಳ್ಳೆಯ ತನ ಬೀರುವಂತಾಗಲಿ. ವೀರಶೈವ ಧರ್ಮವನ್ನು ಓಬಿಸಿ ಪಂಗಡಕ್ಕೆ ಸೇರುವಂತಾಗಲಿ ಎಂದರು.
ರಾಜಗುರು ಗುರುಸ್ವಾಮಿ ಕಲಕೇರಿ ಮಾತನಾಡಿ, ವೀರಶೈವ ಸಮಾಜ ದೊಡ್ಡದು. ಆದರೆ, ಕಾರ್ಯಗಳು ಸಣ್ಣದಾಗುತ್ತಿವೆ. ಇಡೀ ಜಗತ್ತನ್ನು ಗೆಲ್ಲುವ ಶಕ್ತಿ ನಮ್ಮಲ್ಲಿದೆ ಆದರೆ, ಒಗ್ಗಟ್ಟಿನ ಕೊರೆತೆಯಿದೆ ಎಂದರು.
ಸಮಿತಿಯ ನೂತನ ಅಧ್ಯ ಪ್ರಭಯ್ಯ ದಂಡಾವತಿಮಠ ಮಾತನಾಡಿ, ಸಮಾಜ ನನ್ನ ಮೇಲೆ ಗೌರವವನ್ನಿಟ್ಟು ನನಗೆ ಈ ಸ್ಥಾನ ನೀಡಿದೆ. ಆದರೆ, ನಾನು ಅಧ್ಯ ಅಂದುಕೊಳ್ಳುವದಕ್ಕಿಂತ ಸೇವಕ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಈ ಕಾರ್ಯಕ್ರಮಕ್ಕೆ ಜೊತೆಯಾದ ಸಮಿತಿಯ ಪದಾಧಿಕಾರಿಗಳು ಹಾಗೂ ಸಮಾಜದ ಎಲ್ಲ ಹಿರಿಯರನ್ನು ಗೌರವಿಸಿ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುವೆ ಎಂದರು.
ಅಸೂಟಿಯ ರೇವಣಸಿದ್ಧಯ್ಯ ಹಿರೇಮಠ, ಗೌರವಾಧ್ಯ ಬಸಯ್ಯ ಸಾಸ್ವಿಹಳ್ಳಿಮಠ, ಅಡ್ನೂರು ದಾಸೋಹ ಮಠದ ಶ್ರೀಗಳು ಮತ್ತು ಸೊರಟೂರು ಶ್ರೀಗಳು ಮಾತನಾಡಿದರು. ಅಡವೀಂದ್ರಸ್ವಾಮಿ ಮಠದ ಧರ್ಮದಶಿರ್ ಮಹೇಶ್ವರ ಸ್ವಾಮಿಜಿ ಹೊಸಳ್ಳಿಮಠ ಅವರು ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿ ಪ್ರಮಾಣ ಪತ್ರ ವಿತರಿಸಿದರು. ಇದೇ ಸಂದರ್ಭದಲ್ಲಿ ಕುಮಾರವ್ಯಾಸ ಪ್ರಶಸ್ತಿ ಪುರಸತ ಸಿದ್ದೇಶ್ವರ ಶಾಸ್ತ್ರಿ ತೆಲ್ಲೂರ, ಪತ್ರಕರ್ತ ವೆಂಕಟೇಶ ಇಮರಾಪೂರ, ಮಾಳಿಂಗರಾಯ ಪೂಜಾರ ಅವರುಗಳನ್ನು ಸನ್ಮಾನಿಸಲಾಯಿತು. ಜಂಗಮ ಸಮಾಜದ ಕಲ್ಯಾಣ ಮಂಟಪ ನಿರ್ಮಾಣಕ್ಕಾಗಿ ಸೇರಿದ ಸಭಿಕರಿಂದ ಹತ್ತು ಲ ರೂ. ಹೆಚ್ಚು ಹಣ ದೇಣಿಗೆ ಸಂಗ್ರಹವಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಜಂಗಮವಟುಗಳಿಗೆ ಅಯ್ಯಾಚಾರ ಹಾಗೂ ಶಿವದೀೆ ಶಾಸ್ತ್ರೊಕ್ತವಾಗಿ ನೆರವೇರಿತು.
ವಿರೇಶ ಹೊಸಳ್ಳಿಮಠ, ಈಶಣ್ಣ ಮುನವಳ್ಳಿ, ಮಂಜುನಾಥ ಬೆಲೇರಿ, ವಿಜಯಕುಮಾರ ಹಿರೇಮಠ, ನಾಗರತ್ನಾ ಹಿರೇಮಠ, ಪ್ರೀತಿ ದಂಡಾವತಿಮಠ, ಸಂಗಮ್ಮ ಹಿರೇಮಠ, ವಿರೇಶ ಕೂಗುಮಠ, ಜಿ. ಎಸ್. ಹಿರೇಮಠ, ಎಸ್. ಸಿ. ಹಿರೇಮಠ, ರಾಜೇಶ ಕಲ್ಯಾಣಶೆಟ್ಟಿ, ರಾಜು ಗುಡಿಮನಿ, ವಿಕ್ರಮ್ ಪಾಂಡೆ, ಸಿದ್ಧರಾಮಯ್ಯ ಕಟಗಿಹಳ್ಳಿಮಠ ಇತರರು ಇದ್ದರು.