

ಮಂಡ್ಯ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ತಾಳಶಾಸನ ಆನಂದ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ದೇಶಕರ ವಿರುದ್ಧ ಅನುಚಿತ ವರ್ತನೆ ತೋರಿದ್ದು, ಕೂಡಲೇ ಕ್ಷಮೆಯಾಚಿಸಬೇಕು ಎಂದು ಮಹಾಸಭಾದ ನಿರ್ದೇಶಕಿ ವಿ.ಅನಿತಾ ಒತ್ತಾಯಿಸಿದರು.
ಅ.17ರಂದು ನಗರದಲ್ಲಿ ಆಯೋಜಿಸಿದ್ದ ಜಿಲ್ಲಾ ಕಾರ್ಯಕಾರಿ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಸಂಬಂಧ ಆಕ್ಷೇಪ ವ್ಯಕ್ತಪಡಿಸಲಾಯಿತು. ಇದು ನನ್ನ ನಿರ್ಣಯ, ಇರುವುದಾರರೆ ಇರಿ, ಇಲ್ಲವಾದರೆ ಹೊರಡಬಹುದು ಎಂದು ಉದ್ಧಟತನದಿಂದ ವರ್ತಿಸಿದ್ದಲ್ಲದೆ, ಮಹಿಳಾ ಸದಸ್ಯೆಯರಿಗೆ ಗೌರವ ನೀಡದ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಸಮುದಾಯದ ಪರ ಕೆಲಸ ಮಾಡಬೇಕಾದ ಅಧ್ಯಕ್ಷರ ವರ್ತನೆ ಖಂಡನೀಯ. ಕೂಡಲೇ ಚುನಾಯಿತ ಸದಸ್ಯರ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಮಹಿಳೆಯರು, ಸಮಾಜದ ಹಿರಿಯರು ಒಗ್ಗೂಡಿ ತೀವ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ನಿರ್ದೇಶಕರಾದ ಜಗದೀಶ್, ಕೆ.ಜಿ.ಗುರುಮಲ್ಲೇಶ್, ಟಿ.ಎನ್.ನಯನಾ, ಮುಖಂಡ ಪ್ರಶಾಂತ್ ಇದ್ದರು