27ರಂದು ವೀರಶೈವ ಲಿಂಗಾಯಿತ ನೌಕರರ ಸಮಾವೇಶ

ctd----3...
Published on

ಚಿತ್ರದುರ್ಗ: ಜಿಲ್ಲಾ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಜು.27ರಂದು ಬೆಳಗ್ಗೆ 10ಕ್ಕೆ ನಗರದ ಪಂಚಚಾರ್ಯ ಕಲ್ಯಾಣ ಮಂಟಪದಲ್ಲಿ ನೌಕರರ ಸಮಾವೇಶ,ನಿವೃತ್ತ ನೌಕರರಿಗೆ,ಸಾಧಕರಿಗೆ ಸನ್ಮಾನ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಸೆಕೆಂಡ್ ಪಿಯುಸಿ ಪರೀಕ್ಷೆಗಳಲ್ಲಿ ಹೆ ಚ್ಚಿನ ಅಂಕಗೊಳೊಂದಿಗೆ ಉತ್ತಿರ್ಣರಾದ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಸಂಘದ ಗೌರವಾಧ್ಯಕ್ಷ ಪಿ.ಎಂ.ಜಿ.ರಾಜೇಶ್ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಸಮಾರಂಭವನ್ನು ಪುನರಾರಂಭಿ ಸಲಾಗಿದೆ. 2024 ಮೇ31ರಿಂದ ಕಳೆದ ಜೂನ್30ರವರೆಗೆ ನಿವೃತ್ತಿಯಾಗಿರುವ ವಿವಿಧ ಇಲಾಖೆಗಳ ಸಮುದಾಯದ ನಿವೃತ್ತ ನೌಕರರನ್ನು ಸನ್ಮಾನಿಸಲಾಗುವುದು.

ಸಮುದಾಯದ ಐವರು ಸಾಧಕರಾದ ಐಎಫ್‌ಎಸ್ ಅಧಿಕಾರಿ ಕೆ.ಎಸ್.ಸಚಿನ್,ಇಸ್ರೋ ವಿಜ್ಞಾನಿ ಕೆ.ಎನ್.ಮಲ್ಲಿಕಾರ್ಜನ್,ಸಹಾಯಕ ಪ್ರಾಧ್ಯಾಪಕರಾದ ಎ.ಎಸ್.ಸತೀಶ್,ಜೆ.ಆರ್.ಶಂಕರಪ್ಪ ಹಾಗೂ ಶಿಕ್ಷಕ ಟಿ.ಪಿ.ಉಮೇಶ್ ಅವರನ್ನು ಸನ್ಮಾನಿಸಲಾಗುವುದು. ಹಿರಿಯೂರು ಬಿಇಒ ಸಿ.ಎಂ ತಿಪ್ಪೇಸ್ವಾಮಿ ಉಪನ್ಯಾಸ ನೀಡಲಿದ್ದಾರೆ.

ಮುರುಘಾಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಶ್ರೀ ಬಸವಕುಮಾರ ಸ್ವಾಮಿಜಿ ಹಾಗೂ ದಾವ ಣಗೆರೆ ವಿರಕ್ತಮಠದ ಡಾ.ಶ್ರೀ ಬಸವ ಪ್ರಭು ಸ್ವಾಮಿಜಿ ಸಮಾರಂಭದ ಸಾನಿಧ್ಯ ವಹಿಸಲಿದ್ದಾರೆ. ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್,ಸಂಸದ ಗೋವಿಂದ ಎಂ.ಕಾರಜೋಳ ಶಾಸಕರು,ಮಾಜಿ ಶಾಸಕರು,ಗಣ್ಯರು ಉಪಸ್ಥಿತರಿರುತ್ತಾರೆ ಎಂದರು. ಕಾರಣಾಂತ ರಗಳಿಂದ ಅರ್ಜಿ ಸಲ್ಲಿಸಲಾಗದ ನೌಕರರ ಪ್ರತಿಭಾವಂಥ ಮಕ್ಕಳು ಪಾಲಕರ ಗುರುತಿನ ಚೀಟಿ,ಅಂಕಪಟ್ಟಿಯೊಂದಿಗೆ ಹಾಜರಾದರೆ ಅವ ರನ್ನೂ ಪುರಸ್ಕರಿಸಲಾಗುವುದು ಎಂದರು. ಸಂಘದ ಅಧ್ಯಕ್ಷ ಬಿ.ವಿರೇಶ್,ಕಾರ್ಯಾಧ್ಯಕ್ಷ ಎಂ.ಬಿ. ಕೊಟ್ಟೂರೇಶ್ವರ, ಕೆ.ಜಿ.ಅಜಯ್ ಕುಮಾರ್, ಡಿ.ಬಹುಗುಣ ಸುದ್ದಿಗೋಷ್ಠಿಯಲ್ಲಿ ಇದ್ದರು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net