

ಹುಬ್ಬಳ್ಳಿ : ಇಲ್ಲಿನ ವೀರಶೈವ ಲಿಂಗಾಯತ ಸ್ಪೋರ್ಟ್ಸ್ ಫೌಂಡೇಶನ್ ವತಿಯಿಂದ ಸಮಾಜದ ಮಕ್ಕಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಧಾರವಾಡ ಜಿಲ್ಲಾ ಮಟ್ಟದ ವೀರಶೈವ ಲಿಂಗಾಯತ ಕ್ರಿಕೆಟ್ ಪ್ರೀಮಿಯರ್ ಲೀಗ್ ಅನ್ನು ಮೇ 14 ರಿಂದ 18 ರವರೆಗೆ ನೆಹರು ಮೈದಾನದಲ್ಲಿ ಆಯೋಜಿಸಲಾಗಿದೆ.
ಈ ಹೊನಲು -ಬೆಳಕು ಪಂದ್ಯಾವಳಿಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಒಳ ಪಂಗಡದವರು ಭಾಗವಹಿಸಬಹುದು. ಮೊದಲು ನೋಂದಣಿ ಮಾಡಿಕೊಂಡ 16 ತಂಡಗಳಿಗೆ ಮಾತ್ರ ಪಂದ್ಯಾವಳಿಯಲ್ಲಿ ಭಾಗವಹಿಸಲು ಅವಕಾಶವಿದೆ.
ಜಿಲ್ಲೆಯ ಸಮಾಜದ ಆಸಕ್ತರು ಏ. 27 ರಿಂದ ಮೇ 7 ರೊಳಗೆ ತಮ್ಮ ತಂಡಗಳ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು ಎಂದು ಫೌಂಡೇಶನ್ ಅಧ್ಯಕ್ಷ ಶಂಭು ಲೆ$್ಮಶ್ವರಮಠ ತಿಳಿಸಿದ್ದಾರೆ.