ಬೆಂಗಳೂರು: ವಿಧವೆ, ವಿಧುರ, ವಿಚ್ಛೇಧಿತ ಹಾಗೂ ಅವಿವಾಹಿತ ಹಿರಿಯರಿಗಾಗಿ ವೀರಶೈವ ಲಿಂಗಾಯತ ವಧು-ವರರ ವಿಶೇಷ ಮುಖಾ-ಮುಖಿ ಸಮಾವೇಶವು ಜೂ.02ರಂದು ಬೆಳಗ್ಗೆ 11.30ರಿಂದ ಹಮ್ಮಿಕೊಂಡಿರುವುದಾಗಿ ಲಿಂಗಾಯತ ಕಲ್ಯಾಣ ಟ್ರಸ್ಟ್ ತಿಳಿಸಿದೆ.
ಗಾಂಧಿನಗರದ 5ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆಯಲ್ಲಿರುವ ಸಂಸ್ಥೆಯ ಕಚೇರಿಯಲ್ಲಿ ಸಮಾವೇಶ ನಡೆಯಲಿದ್ದು, ಆಸಕ್ತ ವಧು-ವರರು ಮತ್ತು ಪೋಷಕರು ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳಬಹುದು. ಆನ್‌ಲೈನ್ ಮುಖಾಂತರ ಹೆಸರು ನೋಂದಾಯಿಸಲು www.lingayathkalyanatrust.org ಮುಖಾಂತರ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗೆ ದೂ: 080 22269237 ಸಂಪರ್ಕಿಸಬಹುದು.