ವೀರಶೈವ ಸಮಾಜಕ್ಕೆ ರುದ್ರಭೂಮಿ ಮಂಜೂರು ಮಾಡಲಿ

14 KTL 01
ಕವಿತಾಳ ತಹಸೀಲ್ದಾರ್ ಮಂಜುನಾಥ ಅವರಿಗೆ ವೀರಶೈವ ಬಾಂಧವರು ರುದ್ರಭೂಮಿ ಮಂಜೂರು ಮಾಡುವಂತೆ ಮನವಿ ಸಲ್ಲಿಸಿದರು. ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಅರುಣಕುಮಾರ ನಾಗನೂರು, ಉಪಾಧ್ಯಕ್ಷ ಅಮರೇಶ ಹಡಪದ, ಪ್ರಮುಖರಾದ ವೀರೇಶ ಹೂಗಾರ, ಶರಣೇಗೌಡ ಪೊಪಾ, ನಾಡಗೌಡ, ಸುಭಾಸ್ ಚಕೋಟಿ ಇತರರಿದ್ದರು.
Published on

ಕವಿತಾಳ: ಪಟ್ಟಣದ ವೀರಶೈವ ಲಿಂಗಾಯತ ಸಮಾಜಕ್ಕೆ ಹೆಚ್ಚುವರಿ ರುದ್ರಭೂಮಿ ನೀಡಬೇಕೆಂದು ಆಗ್ರಹಿಸಿ ತಹಸೀಲ್ದಾರ್ ಮಂಜುನಾಥ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು. ಹೆಚ್ಚಿನ ಜನಸಂಖ್ಯೆ ಹೊಂದಿದ ಸಮಾಜಕ್ಕೆ 10 ಗುಂಟೆ ರುದ್ರಭೂಮಿ ಇದೆ. ವೀರಶೈವ ಸಮಾಜ 6 ಸಾವಿರ ಜನ ಸಂಖ್ಯೆಗಿಂತ ಹೆಚ್ಚು ಇದೆ. ಸಮಾಜದವರು ನಿಧನರಾದಲ್ಲಿ ಅಂತ್ಯಕ್ರಿಯೆಮಾಡಲು ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಸಚಿವ ಎನ್‌ಎಸ್. ಬೋಸರಾಜು ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net