ವೀರಶೈವ ಜಂಗಮ ಸಂಶೋಧನಾ ಪ್ರತಿಷ್ಠಾನ ಅಸ್ತಿತ್ವಕ್ಕೆ

wwww
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕನ್ನಡ ವಾಙ್ಮಯ ವಿಹಾರದ ವಿದ್ಯಾನಗರಿ ಧಾರವಾಡವನ್ನು ಕೇಂದ್ರ ಸ್ಥಾನವಾಗಿ ಹೊಂದಿ ನೂತನವಾಗಿ ಅಂತಾರಾಷ್ಟ್ರೀಯ ವೀರಶೈವ ಜಂಗಮ ಸಂಶೋಧನಾ ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂದಿದೆ. ಭಾರತದ ಎಲ್ಲೆಡೆ ಇರುವ ವೀರಶೈವ ಮಠ-ಪೀಠಗಳ ಚಾರಿತ್ರಿಕ ಘನತೆ, ಅವುಗಳ ಧರ್ಮ ಜಾಗೃತಿ ಕೈಂಕರ್ಯ, ಸಾಮಾಜಿಕ ಮತ್ತು ಶೈಕ್ಷಣಿಕ ಸಾಧನೆಗಳ ಸೇವೆಗಳನ್ನು ವಿದ್ಯುನ್ಮಾನದ ಬಹುಮುಖಿ ಆವಿಷ್ಕಾರಗಳಲ್ಲಿ ದಾಖಲೀಕರಣ ಮಾಡುವುದು. ಭಾರತ ಸೇರಿ ಜಾಗತಿಕವಾಗಿ ಹಂಚಿ ಹೋಗಿರುವ ವೀರಶೈವ ಜಂಗಮರ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಸಾಧನೆಗಳನ್ನು ಗುರುತಿಸಿ ಜಂಗಮ ರತ್ನ ಪ್ರಶಸ್ತಿ ನೀಡಿ ಗೌರವಿಸುವುದು. ವೀರಶೈವ ಜಂಗಮರ ಸಂಶೋಧನೆಗೆ ಸಂಬಂಧಿಸಿ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳ ಹಾಗೂ ವಿಶೇಷ ಉಪನ್ಯಾಸಗಳ ಆಯೋಜನೆ, ಬದುಕಿನ ಆಧುನಿಕ ಪರಿಸ್ಥಿತಿಯಲ್ಲಿ ವೀರಶೈವ ಜಂಗಮ ಸಮಾಜದ ಸಂಸ್ಕೃತಿ, ಪರಂಪರೆ, ನೀತಿ, ಮೌಲ್ಯಗಳು ಕ್ರಮೇಣ ಬದಲಾವಣೆಯಾಗುತ್ತಿರುವ ಹಿನ್ನೆಲೆ ಗಮನಿಸಿ ಹಲವಾರು ಮಹತ್ವದ ಆಶಯಗಳ ನೆಲೆಯಲ್ಲಿ ಪ್ರತಿಷ್ಠಾನ ಸ್ಥಾಪಿಸಲಾಗಿದೆ. ನಗರದಲ್ಲಿ ಏರ್ಪಡಿಸಿದ್ದ ಪ್ರತಿಷ್ಠಾನದ ಮೊದಲ ಸಾಮಾನ್ಯ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕವಿವಿ ವಿಶ್ರಾಂತ ಪ್ರಾಧ್ಯಾಪಕ, ಸಂಶೋಧಕ ಡಾ. ಆರ್.ಎಂ. ಷಡಕ್ಷರಯ್ಯ(ಅಧ್ಯಕ್ಷ), ಕವಿವಿ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಸುಭಾಷ ಹಿರೇಮಠ, ಡಾ.ಬಿ.ಕೆ. ಒಡೆಯರ, ಡಾ.ಜೆ.ಎಂ.ನಾಗಯ್ಯ (ಉಪಾಧ್ಯಕ್ಷರು), ಬಾಗಲಕೋಟೆ ಶ್ರೀ ಬಸವೇಶ್ವರ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಡಾ. ವಿಜಯಕುಮಾರ ಕಟಗಿಹಳ್ಳಿಮಠ (ಪ್ರಧಾನ ಕಾರ್ಯದರ್ಶಿ), ಕವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ. ಎಸ್. ಬಿ. ಹಿರೇಮಠ (ಕಾರ್ಯದರ್ಶಿ), ಪದವಿ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕಿ ಪ್ರೊ. ಇಂದುಮತಿ ಸಂಕದಮಠ (ಕೋಶಾಧಿಕಾರಿ), ಮೋಹನ ಹಿರೇಮಠ, ಡಾ. ರಾಜೇಶ್ವರಿ ಮಹೇಶ್ವರಯ್ಯ, ಡಾ. ಕುಮಾರ ಹಿರೇಮಠ, ಸಂಗಣ್ಣ ಪಾಟೀಲ, ಡಾ. ಎಸ್.ಎಂ. ಗಂಗಾಧರಯ್ಯ, ಜಿ.ಕೆ. ಜಯದೇವ, ಟಿ.ಎಂ. ಮಂಜೇಶ, ಇಂದೂಧರ ಸಾಲಿ, ಗುರುಮೂರ್ತಿ ಯರಗಂಬಳಿಮಠ, ಪ್ರೊ. ಶಶಿಧರ ಹಿರೇಮಠ (ಕಾರ್ಯಕಾರಿ ಮಂಡಳಿ ನಿರ್ದೇಶಕರು) ಆಯ್ಕೆ ಆಗಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ಆರ್.ಎಂ. ಷಡಕ್ಷರಯ್ಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net