

ಮಡಿಕೇರಿ: ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ವೀರಸೇನಾನಿ ಜನರಲ್ ತಿಮ್ಮಯ್ಯನವರ ಪುತ್ತಳಿ ಸ್ಥಾಪನೆಗೆ ಜನರಲ್‌ತಿಮ್ಮಯ್ಯ ಶಾಲಾ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪನವರ ಅಧ್ಯಕ್ಷತೆಯಲ್ಲಿ ಮಡಿಕೇರಿಯ ಜನರಲ್‌ತಿಮ್ಮಯ್ಯ ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ಶನಿವಾರ ಸಭೆಯಲ್ಲಿ ತೀರ್ಮಾನಿಸಲಾಯಿತು.
ಮಡಿಕೇರಿಯ ಕೊಡವ ಸಮಾಜದ ಅಧೀನದಲ್ಲಿ ವೀರಸೇನಾನಿ ಜನರಲ್ ತಿಮ್ಮಯ್ಯ ಹೆಸರಿನಲ್ಲಿ ಶಾಲೆ ಪ್ರಾರಂಭವಾಗಿದ್ದು ಉತ್ತಮ ಹೆಸರುಗಳಿಸಿದೆ. ಶಾಲೆೆಯಲ್ಲಿ ಮುಂದಿನ ಮೂರು ನಾಲ್ಕು ತಿಂಗಳಲ್ಲಿ ಜನರಲ್‌ತಿಮ್ಮಯ್ಯ ಪುತ್ತಳಿ ಅನಾವರಣಗೊಳ್ಳಲಿದೆ. ಪುತ್ತಳಿ ನಿರ್ಮಾಣ ಕಾರ್ಯಕ್ಕೆ ಕನ್ನಂಡ ಸಂಪತ್‌ರವರ ನೇತ್ರತ್ವದಲ್ಲಿ ಉಪಸಮಿತಿಯನ್ನು ರಚಿಸಲಾಯಿತು. ಜನರಲ್‌ತಿಮ್ಮಯ್ಯಪುತ್ತಳಿ ಸ್ಥಾಪನೆಗೆ ದಾನಿಗಳು ಮುಂದೆ ಬಂದರೆ ಸ್ವಾಗತಿಸುತೇವೆಂದರು.
ಸಭೆಯಲ್ಲಿ ಜನರಲ್ ತಿಮ್ಮಯ್ಯ ಪಭ್ಲಿಕ್ ಶಾಲಾ ಆಡಳಿತ ಮಂಡಳಿಯ ಕಾರ್ಯಧ್ಯಕ್ಷರಾದ ನಂದಿನೆರವಂಡ ಚೀಯಣ್ಣ, ಸಂಚಾಲಕಿ ಕನ್ನಂಡ ಕವಿತ ಬೊಳ್ಳಪ್ಪ, ಸಮಾಜದ ಗೌರವ ಕಾರ್ಯದರ್ಶಿ ಕನ್ನಂಡಸಂಪತ್, ಶಾಲಾ ಮುಖ್ಯೋಪದ್ಯಾಯರಾದ ಕಲ್‌ಲ್ಮಾಡಂಡ ಸರಸ್ವತಿ ಚಂಗಪ್ಪ, ಶಾಲಾ ಆಡಳಿತ ಮೇಲ್ವಿಚಾರಕ ಮುಕ್ಕಾಟಿರ ಪೊನ್ನಮ್ಮ, ನಿರ್ದೇಶಕರುಗಳಾದ ಕಾಳಚಂಡ ಅಪ್ಪಣ್ಣ, ಚೌರಿರ ಕಾವೇರಿಪೂವಯ್ಯ, ಬೊಪ್ಪಂಡ ಸರಳಾ ಕರುಂಬಯ್ಯ,
ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಮಂಡಿರ ಸದಾಮುದ್ದಪ್ಪ, ಮೂವೇರ ಜಯರಾಂ, ನಂದಿನೆರವಂಡ ರವಿಬಸಪ್ಪ, ಪುತ್ತರಿರ ಕರುಣ್ ಕಾಳಯ್ಯ ಹಾಜರಿದ್ದರು.