ವಿಮಾನ ನಿಲ್ದಾಣಕ್ಕೆ ಅಬ್ಬಕ್ಕ ಹೆಸರು : ಮಮತಾ ಬಲ್ಲಾಳ್ ಆಶಯ

New Project (32)
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಬೆಂಗಳೂರು ಕಟ್ಟಿದ ಕೆಂಪೇಗೌಡರ ಹೆಸರನ್ನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಇಡಲಾಗಿದೆ. ಅದರಂತೆ ತುಳುನಾಡಿನ ರಾಣಿ ಅಬ್ಬಕ್ಕಳ ಹೆಸರನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ಇಡಬೇಕಿದೆ ಎಂದು ಮೂಡುಬಿದಿರೆ ಚೌಟರ ಅರಮನೆಯ ರಾಣಿ ಅಬ್ಬಕ್ಕ ವಂಶಸ್ಥೆ ಮಮತಾ ಬಲ್ಲಾಳ್ ಅಭಿಪ್ರಾಯಪಟ್ಟರು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಉಳ್ಳಾಲ ನಗರಸಭೆ ಆವರಣದಲ್ಲಿರುವ ಮಹಾತ್ಮಗಾಂಧಿ ರಂಗಮಂದಿರದಲ್ಲಿ ಶನಿವಾರ 28ನೇ ವರ್ಷದ ವೀರರಾಣಿ ಅಬ್ಬಕ್ಕ ಉತ್ಸವ ಉದ್ಘಾಟಿಸಿ ಮಾತನಾಡಿದರು.

ಇತರ ರಾಣಿಯರ ಜೀವನ ಚರಿತ್ರೆಗಳಿಗೆ ಸಿಕ್ಕ ಪುಸ್ತಕ ರೂಪದ ಪ್ರಚಾರ ರಾಣಿ ಅಬ್ಬಕ್ಕಳಿಗೆ ಸಿಗಲಿಲ್ಲ. ಆದರೂ ಕಳೆದೆರಡು ದಶಕಗಳಿಂದ ರಾಣಿ ಅಬ್ಬಕ್ಕ ಉತ್ಸವ ಸಮಿತಿಯಿಂದ ಪುಸ್ತಕ, ಯಕ್ಷಗಾನ, ನಾಟಕ, ಸಿಡಿ, ಕಾರ್ಯಾಗಾರ, ಅಧ್ಯಯನ ಪೀಠ, ನೌಕೆಯೊಂದಕ್ಕೆ ಹೆಸರಿಡುವ ಮೂಲಕ ಹೆಚ್ಚಿನ ಪ್ರಚಾರ ನೀಡುವ ಪ್ರಯತ್ನ ನಡೆದಿದೆ. ಗೂಗಲ್, ಯುಟ್ಯೂಬ್‌ನಂಥ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಪ್ರಚಾರ ಸಿಕ್ಕಿರುವುದು ಸಂತಸದ ವಿಚಾರ ಎಂದರು.

ವಿವಿಧ ಗೋಷ್ಠಿಯನ್ನು ನಗರಸಭೆ ಅಧ್ಯಕ್ಷೆ ಶಶಿಕಲಾ ಹಾಗೂ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನ ಮರದ ಉದ್ಘಾಟಿಸಿದರು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬೆಂಗಳೂರಿನ ದಿ ಮೈಸೂರ್ ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ರಾಜ್ಯ ಅಲೆಮಾರಿ ಅರೆಅಲೆಮಾರಿ ನಿಗಮದ ನಿಕಟಪೂರ್ವ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ, ನಗರಸಭೆ ಉಪಾಧ್ಯಕ್ಷೆ ಸಪ್ನಾ ಹರೀಶ್, ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಯಶವಂತ ಅಮೀನ್, ನಗರಸಭೆ ಪೌರಾಯುಕ್ತ ಮತ್ತಡಿ, ಸಮಾಜ ಸೇವಕರಾದ ಚಂದ್ರಶೇಖರ್ ಉಚ್ಚಿಲ್, ಹೈದರ್ ಪ್ರತಿಪಾಡಿ, ಸದಾನಂದ ಬಂಗೇರ, ಸೀತಾರಾಮ್ ಬಂಗೇರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹರೀಶ್, ಟಿ.ಎಸ್.ಅಬ್ದುಲ್ಲ, ನಗರಸಭೆ ಮಾಜಿ ಸದಸ್ಯರಾದ ಫಾರೂಕ್ ಉಳ್ಳಾಲ, ಮೋಹನ್, ಸೋಮೇಶ್ವರ ಪುರಸಭೆ ಉಪಾಧ್ಯಕ್ಷ ರವಿಶಂಕರ್, ಸದಸ್ಯರಾದ ಜಯ ಸುವರ್ಣ, ಪುರುಷೋತ್ತಮ ಗಟ್ಟಿ ಉಪಸ್ಥಿತರಿದ್ದರು.

ಉತ್ಸವ ಸಮಿತಿ ಅಧ್ಯಕ್ಷ ದಿನಕರ್ ಉಳ್ಳಾಲ್ ಸ್ವಾಗತಿಸಿದರು. ಸ್ವಾಗತ ಅಧ್ಯಕ್ಷ ಕೆ.ಜಯರಾಮ ಶೆಟ್ಟಿ ಪ್ರಸ್ತಾವನೆಗೈದರು. ಶಶಿಕಾಂತಿ ಉಳ್ಳಾಲ್ ವಂದಿಸಿದರು. ಕೆಎಂಕೆ ಮಂಜನಾಡಿ ಹಾಗೂ ಧನಲಕ್ಷ್ಮ್ಮೀ ಗಟ್ಟಿ ನಿರೂಪಿಸಿದರು.

ಪರರಿಗಾಗಿ, ಈ ನಾಡಿಗಾಗಿ ಬದುಕಿದವರನ್ನು ನೆನಪಿಸುವ ಕಾರ್ಯ ಅಭಿನಂದನೀಯ. ಉತ್ಸವದ ಮೂಲಕ ಉಳ್ಳಾಲ ವೀರರಾಣಿ ಅಬ್ಬಕ್ಕ ಗತಕಾಲದ ವೈಭವ ನೆನಪಿಸುತ್ತಿರುವುದು ಶ್ಲಾಘನೀಯ. ಈ ಉತ್ಸವ ಮುಂದಿನ ದಿನಗಳಲ್ಲಿ ವಿಶೇಷವಾಗಿ ರಂಜಿಸುವಂತೆ ಹಾಗೂ ದೇಶಪ್ರೇಮ ಮೂಡುವಂತೆ ಮಾಡಲು ಸಮಿತಿ ಜತೆ ಅವಿರತ ಶ್ರಮಿಸುತ್ತೇನೆ. ಕ್ಯಾ.ಬ್ರಿಜೇಶ್ ಚೌಟ, ಸಂಸದರು ಅಬ್ಬಕ್ಕಳ ಹೆಸರಿನಲ್ಲಿ ಒಂದು ಲಕ್ಷ ರೂ. ಪ್ರೋತ್ಸಾಹಧನ ಸಮೇತ ಮಹಿಳೆಯೊಬ್ಬರಿಗೆ ಅಬ್ಬಕ್ಕ ಪ್ರಶಸ್ತಿ ನೀಡುವ ಉತ್ಸವ ಸಮಿತಿ ಕಾರ್ಯವೈಖರಿ ಮನಗೆದ್ದಿದೆ. ಮುಂದಿನ ವರ್ಷದಿಂದ ಅಬ್ಬಕ್ಕ ಉತ್ಸವಕ್ಕೆ 10 ಲಕ್ಷ ರೂ. ಮಂಜೂರು ಮಾಡುವ ಹಾಗೂ 2,000 ಅಬ್ಬಕ್ಕ ಸಂಕಥನ ಪ್ರತಿ ಮರು ಮುದ್ರಿಸಿ ಕೊಡಲಾಗುವುದು. ಸೋಮಣ್ಣ ಬೇವಿನ ಮರದ, ಅಧ್ಯಕ್ಷರು, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ https://www.vijayavani.net/vinoda-anchan-was-elected-as-the-president https://www.vijayavani.net/like-infrastructure-wetlands-are-essential

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net