ವೀರಪ್ಪಜ್ಜನವರ ಪುಣ್ಯಾರಾಧನಾ ಶತಮಾನೋತ್ಸವ ಫೆ. 5ರಂದು

NRGL SAMALOCHANA SABHE
Published on

ನರೇಗಲ್ಲ: ಕೋಡಿಕೊಪ್ಪದ ಶ್ರೀ ಹುಚ್ಚೀರೇಶ್ವರರ ಪುಣ್ಯಾರಾಧನಾ ಶತಮಾನೋತ್ಸವವನ್ನು ಫೆಬ್ರವರಿ 5ರಂದು ಆಚರಿಸಲು ಹಾಗೂ ಜ. 30ರಿಂದ ಶ್ರೀ ವೀರಪ್ಪಜ್ಜನವರ ಪುರಾಣ ಪ್ರವಚನ ಪ್ರಾರಂಭಿಸಲು ಸಭೆಯಲ್ಲಿ ತೀರ್ವನಿಸಲಾಯಿತು.

ಮುಂಡರಗಿಯ ಶ್ರೀ ಅನ್ನದಾನೇಶ್ವರ ಮಠದ ನಾಡೋಜ ಶ್ರೀ ಅನ್ನದಾನ ಸ್ವಾಮೀಜಿ, ನಿಡಗುಂದಿಕೊಪ್ಪದ ಶ್ರೀ ಅಭಿನವ ಚನ್ನಬಸವ ಗಳು, ಯಲಬುರ್ಗಾದ ಶ್ರೀ ಸಿದ್ಧ್ದಾಮ ಶಿವಾಚಾರ್ಯರು, ರೋಣ ಬೂದೀಶ್ವರ ಮಠದ ಡಾ. ವಿಶ್ವನಾಥ ಸ್ವಾಮೀಜಿಗಳ ನೇತೃತ್ವದಲ್ಲಿ ಪುರಾಣ ಉದ್ಘಾಟನೆ ನೆರವೇರಲಿದೆ. ಫೆ. 5ರಂದು ಮಧ್ಯಾಹ್ನ 3 ಗಂಟೆಗೆ ಶತಮಾನೋತ್ಸವ ಉದ್ಘಾಟನೆಗೊಳ್ಳಲಿದೆ. ಫೆ. 6ರಂದು ಐದು ಜೊತೆ ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಫೆ. 7ರಂದು ಬೆಳಗ್ಗೆ 11ಕ್ಕೆ ಶತಮಾನೋತ್ಸವದ ಮುಕ್ತಾಯ ಸಮಾರಂಭದಲ್ಲಿ ನಡೆಯಲಿದೆ ಎಂದು ಸಭೆಯಲ್ಲಿ ತೀರ್ವನಿಸಲಾಯಿತು.

ಶಿವನಗೌಡ ಪಾಟೀಲ, ಕರವೇ ಜಿಲ್ಲಾಧ್ಯಕ್ಷ ಹನುಮಂತ ಅಬ್ಬಿಗೇರಿ, ಜೈ ಭೀಮ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಮೈಲಾರಪ್ಪ ಚಳ್ಳಮರದ, ನಿವೃತ್ತ ಉಪನ್ಯಾಸಕ ದಿಲೀಪ ಮುಗಳಿ ಮಾತನಾಡಿದರು. ರೋಣ ಬೂದೀಶ್ವರ ಮಠದ ಡಾ. ವಿಶ್ವನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ. ಎಂ.ಸಿ. ಚಪ್ಪನ್ನಮಠ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಎಂ.ಎ. ಹಿರೇವಡೆಯರ ಅತಿಥಿಗಳಾಗಿದ್ದರು. ಬಸವರಾಜ ಜಾಲಿಹಾಳ, ಡಾ. ಎಲ್.ಎಸ್. ಗೌರಿ ಹಾಗೂ ಕೆ.ಎಸ್. ಕೋರಧಾನ್ಯಮಠ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net