ವೀರಣ್ಣ ಸವಡಿ ಸಭಾನಾಯಕ

savadi
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯ ಸಭಾ ನಾಯಕರಾಗಿ ಹಿರಿಯ ಸದಸ್ಯ ವೀರಣ್ಣ ಸವಡಿ ನೇಮಕಗೊಂಡಿದ್ದಾರೆ.

ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಈ ನೇಮಕ ಮಾಡಿದ್ದಾರೆ.

ಸವಡಿ ನಾಲ್ಕನೇ ಬಾರಿ ಸದಸ್ಯರಾಗಿದ್ದು, ಒಮ್ಮೆ ಮೇಯರ್ ಸಹ ಆಗಿದ್ದರು. ಶನಿವಾರವಷ್ಟೇ ಮೇಯರ್ ಆಗಿ ಚುನಾಯಿತರಾಗಿರುವ ರಾಮಪ್ಪ ಬಡಿಗೇರ ಸಹ ನಾಲ್ಕನೇ ಬಾರಿ ಪಾಲಿಕೆಗೆ ಆಯ್ಕೆಯಾಗಿರುವ ಸದಸ್ಯರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net