ಹಿರೀಸಾವೆ: ಹೋಬಳಿಯ ಹೊಸಹಳ್ಳಿ ಪುರ ಗ್ರಾಮದ ಶ್ರೀ ವೀರಭದ್ರೇಶ್ವರಸ್ವಾಮಿ ಸನ್ನಿಧಿಯಲ್ಲಿ ದೀಪಾವಳಿ ಹಾಗೂ ಬಲೀಂದ್ರ ಪೂಜೆ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ಮಂಗಳವಾರ ನೆರವೇರಿದವು.
ಮುಂಜಾನೆಯಿಂದಲೇ ಶ್ರೀ ವೀರಭದ್ರೇಶ್ವರಸ್ವಾಮಿಗೆ ಪೂಜಾ ವಿಧಿ ವಿಧಾನಗಳು ಪ್ರಾರಂಭಗೊಂಡು ಕುಂಕುಮಾರ್ಚನೆ, ಪುಷ್ಪಾರ್ಚನೆ, ರುದ್ರಾಭಿಷೇಕದ ಬಳಿಕ ಒಡವೆ-ವಸ್ತ್ರ ಹಾಗೂ ವಿವಿಧ ಬಗೆಯ ಪುಷ್ಪಗಳಿಂದ ಅಲಂಕಾರ ಮಾಡಲಾಯಿತು. ಬೆಳಗ್ಗೆ 8.30 ರಿಂದ 11.30 ರವರೆಗೆ ವಿಶೇಷ ಪೂಜೆಗಳು ಜರುಗಿದವು. ಭದ್ರಕಾಳಿ ಹಾಗೂ ಬುತ್ತಿ ಸೋಮೇಶ್ವರಸ್ವಾಮಿಗೆ ವಿವಿಧ ಅಲಂಕಾರ ಹಾಗೂ ಪೂಜೆಗಳನ್ನು ಸಲ್ಲಿಸಲಾಯಿತು. ಮಹಾ ಮಂಗಳಾರತಿ ಬಳಿಕ ಪ್ರಸಾದ ವಿನಿಯೋಗ ನಡೆಯಿತು.
ಚಂದ್ರಣ್ಣ, ಪಿ.ಕೆ.ಶಿವಶಂಕರ್, ತೋಟಿ ಜಯರಾಂ, ಕೆ.ಪಿ.ಪುಟ್ಟರಾಜು, ತಗಡೂರು ಗ್ರಾಮಸ್ಥರು ಇದ್ದರು.