ವೀರಭದ್ರೇಶ್ವರ ಕಲ್ಯಾಣ ಮಹಾಮಹೋತ್ಸವ ನಾಡಿದ್ದಿಂದ

10mjr1
ಯಡೂರ ಗ್ರಾಮದಲ್ಲಿ ಹಮ್ಮಿಕೊಂಡಿರುವ ಭದ್ರಕಾಳಿ&ವೀರಭದ್ರೇಶ್ವರ ಕಲ್ಯಾಣ ಮಹೋತ್ಸವ ಅಂಗವಾಗಿ ವೀರಭದ್ರನಿಗೆ ವಧುವನ್ನು ನೋಡಲು ಹೊರಟಿರುವ ಶ್ರೀಶೈಲ ಸ್ವಾಮೀಜಿ.
Published on

ಮಾಂಜರಿ: ಚಿಕ್ಕೋಡಿ ತಾಲೂಕಿನ ಯಡೂರಿನ ವೀರಭದ್ರ ದೇವರ ಹಾಗೂ ಕಾಡದೇವರ ಮಠದ ಸಂಯುಕ್ತಾಶ್ರಯದಲ್ಲಿ ಮಾ.13, 14 ರಂದು ಶ್ರೀ ಭದ್ರಕಾಳಿ ವೀರಭದ್ರೇಶ್ವರ ಕಲ್ಯಾಣ ಮಹಾ ಮಹೋತ್ಸವ, ಮಹಿಳೆಯರಿಂದ ರಜತ ಬೆಳ್ಳಿ ರಥೋತ್ಸವ ಹಾಗೂ ಸಹಸ್ರಾರು ಸುಮಂಗಲೆಯರ ಉಡಿ ತುಂಬುವ ಕಾರ್ಯಕ್ರಮ, ಗುಗ್ಗಳೋತ್ಸ್ಸವ ಮತ್ತು ಪುರವಂತರ ಮಹಾಮೇಳವನ್ನು ವೀರಭದ್ರೇಶ್ವರ ದೇವಸ್ಥಾನದ ವಾಹನ ನಿಲುಗಡೆ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚೆನ್ನ ಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಮಾ.13 ರಂದು ಸಂಜೆ 5.18 ಗಂಟೆಗೆ ಭದ್ರಕಾಳಿ&ವೀರಭದ್ರೇಶ್ವರ ಕಲ್ಯಾಣ ಮಹೋತ್ಸವ, ರಾತ್ರಿ 7.30 ಗಂಟೆಗೆ ಸಹಸ್ರ ಸುಮಂಗಲೆಯರ ಉಡಿ ತುಂಬುವ ಕಾರ್ಯಕ್ರಮ, ರಾತ್ರಿ 9 ಗಂಟೆಗೆ ಮಹಾಪ್ರಸಾದ ಜರುಗಲಿದೆ.

ಮಾ.14 ಬೆಳಗ್ಗೆ 8 ಗಂಟೆಗೆ ವೀರಭದ್ರ&ಭದ್ರಕಾಳಿ ಮೂರ್ತಿಗಳ ಗ್ರಾಮೋತ್ಸವ, ಗುಗ್ಗಳೋತ್ಸವ ಮತ್ತು ಪುರವಂತರ ಮಹಾಮೇಳ, 10.30ಕ್ಕೆ ಮಹಿಳೆಯರಿಂದ ಬೆಳ್ಳಿ ರಥೋತ್ಸವ, ಮಧ್ಯಾಹ್ನ 12ಗಂಟೆಗೆ ಅಗ್ನಿ ಪ್ರವೇಶ ಕಾರ್ಯಕ್ರಮ ಜರುಗಲಿದೆ. ಶ್ರೀಶೈಲ ಪೀಠದ ಜಗದ್ಗುರು ಡಾ.ಚೆನ್ನ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸಿಂದಗಿಯ ಸಾರಂಗಮಠ ಗಚ್ಚಿನ ಮಠದ ಡಾ.ಪ್ರಭು ಸಾರಂಗಧೇವರು ಅಧ್ಯತೆ ವಹಿಸುವರು. ಬೆಂಗಳೂರಿನ ಯುವ ವಾಗ್ಮಿ ಲೇಖಕರು ಹರಿಕ್​ ಮಂಜುನಾಥ ಉಪನ್ಯಾಸ ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net