

ಹಿರೇಕೆರೂರ:ಪಟ್ಟಣದ ತೋಂಟದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಭಕ್ತ ಸಮೂಹದ ವತಿಯಿಂದ ಮಂಗಳವಾರ ವೀರಭದ್ರೇಶ್ವರ ಜಯಂತಿ ಆಚರಿಸಲಾಯಿತು. ವೀರಭದ್ರೇಶ್ವರ ದೇವರ ಜಯಂತಿ ನಿಮಿತ್ತ ಪ್ರಶಾಂತಯ್ಯಶಾಸ್ತ್ರೀ ಮಠದ, ಹಿರಣ್ಣಯ್ಯ ಮಠದ ಅವರ ವೈದಿಕತ್ವದಲ್ಲಿ ದೇವರಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ ಪೂಜೆ, ನಂತರ ದೇವರ ಪಾಲಕಿ ಉತ್ಸವ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನ ತಲುಪಿತು. ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ನಾಗರಾಜ ರಾಯನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಬಾಬಣ್ಣ ಹಂಚಿನ, ರಾಕೇಶ ಶೆಟ್ಟರ, ಸಂತೋಷ ವಾಲಿ, ಗಣೇಶ ಹಳಕಟ್ಟಿ, ಶಿವಲಿಂಗಪ್ಪ ಕಲ್ಯಾಣಿ, ಚಂದ್ರಣ್ಣ ಹಲವಾಲದ, ಮಲ್ಲೀಕಾರ್ಜುನ ಹಳಕಟ್ಟಿ, ಶಂಕರ ಕೋರಿ, ಈರಣ್ಣ ಹಾದ್ರಿಹಳ್ಳಿ, ಪ್ರಭು ಕುಬಸದ, ರಾಜು ಹಾದ್ರಿಹಳ್ಳಿ, ಜಗದೀಶ ಹಳ್ಳೂರ ಇತರರಿದ್ದರು.