

ಮುನವಳ್ಳಿ: ಶಿವಸಂಸತಿಯ ಮೂಲಪುರುಷ ಶ್ರೀ ವೀರಭದ್ರೇಶ್ವರ ಜಯಂತಿ ಆಚರಣೆ ಅಂಗವಾಗಿ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಆ.26ರಂದು ಬೆಳಗ್ಗೆ 9 ಗಂಟೆಗೆ ತೊಟ್ಟಿಲು ಪೂಜೆ, ಸಂತಾನ ಪ್ರಾಪ್ತಿ ಕಂಕಣ ಮತ್ತು ವಿವಾಹ ಕಂಕಣಧಾರಣೆ ಕಾರ್ಯಕ್ರಮ ಜರುಗಲಿದೆ. ನಂತರ ರುದ್ರಾಭಿಷೇಕ, ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ ನೆರವೇರಲಿವೆ ಎಂದು ವೀರಯ್ಯಶಾಸ್ತ್ರಿ ಮಠಪತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.