ಇಂದಿನಿಂದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ

Veerabhadreshwara Jatra festival begins today
Published on

ವಿಜಯಪುರ : ನಗರದ ಸಿದ್ಧೇಶ್ವರ ದೇವಸ್ಥಾನ ಆವರಣದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಆ. 24 ರಿಂದ ಆ. 26 ರವರೆಗೆ ನಡೆಯಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಆ. 24 ರಂದು ಸಂಜೆ ವೀರಭದ್ರೇಶ್ವರ ಹಾಗೂ ಭದ್ರಕಾಳಿ ಕಲ್ಯಾಣ ಮಹೋತ್ಸವ, ಆ. 25 ರಂದು ಬೆಳಗ್ಗೆ 10 ಗಂಟೆಗೆ ಮುತೆದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಮಧ್ಯಾಹ್ನ 2ಕ್ಕೆ ಸಿದ್ಧೇಶ್ವರ ಸಂಸ್ಥೆಯ ನಿರ್ದೇಶಕ ರಾಮನಗೌಡ ಪಾಟೀಲ ಯತ್ನಾಳ ಅವರಿಂದ ಜಾತ್ರಾ ಮಹೋತ್ಸವದ ಉದ್ಘಾಟಣೆ ನೆರವೇರಲಿದೆ.

ಅದೇ ದಿನ ಸಂಜೆ 4ಕ್ಕೆ ವೀರಭದ್ರೇಶ್ವರ ಹಾಗೂ ಭದ್ರಕಾಳಿ ಉಚೈ ತೇರು ಮತ್ತು ಅಡ್ಡ ಪಲ್ಲಕ್ಕಿ ಉತ್ಸವ ಪ್ರಮುಖ ಬೀದಿಗಳಲ್ಲಿ ಮೇರವಣಿಗೆ ನಡೆಯಲಿದೆ. ರಾತ್ರಿ ಭಜನಾ ಕಾರ್ಯಕ್ರಮಗಳು ಜರುಗಲಿವೆ.ಆ. 26 ರಂದು ಬೆಳಗ್ಗೆ 7ಕ್ಕೆ ವಿವಿಧ ವಾದ್ಯ ಹಾಗೂ ಪುರವಂತರ ಸೇವೆಯ ಜತೆಗೆ ವೀರಭದ್ರೇಶ್ವರ ಭದ್ರಕಾಳಿ ಹಾಗೂ ಶಿವಯೋಗಿ ಸಿದ್ಧೇಶ್ವರರ ಪಲ್ಲಕ್ಕಿ, ನಂದಿ ಧ್ವಜಗಳ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ನಂತರ ಮರಳಿ ನೀಲಕಂಠೇಶ್ವರ ದೇವಾಲಯಕ್ಕೆ ಆಗಮಿಸಲಿದೆ. ಮಧ್ಯಾಹ್ನ 12ಕ್ಕೆ ಪುರವಂತರರು ಹಾಗೂ ಭಕ್ತಾಧಿಗಳಿಂದ ಅಗ್ನಿ ಪ್ರವೇಶದ ನಂತರ ಮಹಾ ಪ್ರಸಾದ ವಿತರಣೆ ಜರುಗಲಿದೆ.

ಸಂಜೆ 5.30ಕ್ಕೆ ನಾಗಠಾಣದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಕಳಸಾರೋಹಣ ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಂದ ತೇರೊತ್ಸವದ ಉದ್ಘಾಟನೆ ನೆರವೇರಲಿದೆ ಎಂದು ಸಂಸ್ಥೆ ಚೇರ್ಮನ್​ ಬಸಯ್ಯ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net