ವೀರಭದ್ರೇಶ್ವರ ಅದ್ದೂರಿ ಜಾತ್ರಾ ಮಹೋತ್ಸವ

7Belavadi1
Published on

ಯಾಸಿನ ಕಿತ್ತೂರ ಮಲ್ಲಮ್ಮನ ಬೆಳವಡಿ

ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಮೇ 3 ರಿಂದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಆರಂಭವಾಗಿದ್ದು, 12ರ ವರೆಗೆ ಅದ್ದೂರಿಯಾಗಿ ಜರುಗಲಿದೆ.

ಮೇ 8 ರಂದು ಸಂಜೆ 5 ಗಂಟೆಗೆ ಶ್ರೀ ವೀರಭದ್ರೇಶ್ವರ ಮಹಾರಥೋತ್ಸವ ನೆರವೇರಲಿದೆ. ಪಂಚಗ್ರಹ ಹಿರೇಮಠದ ಶಿವಸಿದ್ದರಾಮೇಶ್ವರ ಮಹಾಂತ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡುವರು. ಗ್ರಾಮದ ಈಶ್ವರ ದೇವಸ್ಥಾನ ಮುಂದೆ ರಥ 4 ದಿನ ವಾಸ್ತವ್ಯ ಮಾಡಿ ಮೇ 12 ರಂದು ಪುನ@ ರಥ ಮೂಲ ಸ್ಥಳಕ್ಕೆ ಆಗಮಿಸಿ ಜಾತ್ರೆ ಸಂಪನ್ನಗೊಳ್ಳಲಿದೆ.

ಮೇ 9 ರಂದು ಶ್ರೀ ಗ್ರಾಮದೇವಿಯರಿಗೆ ಉಡಿ ತುಂಬುವ ಕಾರ್ಯ ಜರುಗಲಿದೆ. ಅಂದು ಉದ್ಯಮಿ ಸುನೀಲ ವರ್ಣೇಕರ ಪ್ರಸಾದ ಸೇವೆ ಮಾಡುವರು.

ಐತಿಹಾಸಿಕ ಹಿನ್ನೆಲೆ: ಸರ್ವ ಧರ್ಮಗಳ ಸಮನ್ವಯ ರಾಣಿ ಮಲ್ಲಮ್ಮಳ ಆರಾಧ್ಯದೈವ, ಐತಿಹಾಸಿಕ ಶ್ರೀ ವೀರಭದ್ರೇಶ್ವರ ದೇವಾಲಯ ಶ್ರದ್ಧಾ ಕೇಂದ್ರವಾಗಿದೆ. ವೀರಭದ್ರೇಶ್ವರ ಜಾತ್ರೆ ಹಿನ್ನೆಲೆಯಲ್ಲಿ ಹಿಂದು&ಮುಸ್ಲಿಂ ಭಾವೈಕ್ಯಯ ತವರೂರು ಮಲ್ಲಮ್ಮನ ಬೆಳವಡಿಯ ಗ್ರಾಮದ ಮನೆ&ಮನಗಳಲ್ಲಿ ಸಂಭ್ರಮ ಮನೆ ಮಾಡಿದೆ. ಎಲ್ಲ ಸಮುದಾಯದವರು ಭಾಗವಹಿಸಿ ಭಕ್ತಿ ಮೆರೆಯುತ್ತಿದ್ದಾರೆ.

ಸ್ಥಳಿಯ ವಿರಕ್ತಮಠದ ಪೂಜ್ಯರು ಪ್ರತಿ ವರ್ಷ ಜಾತ್ರೆ ದಿನಾಂಕ ನಿಗದಿಗೊಳಿಸುತ್ತಾರೆ. ತುರಾಯಿ&ತೇರಿನ ಹಗ್ಗ ವ್ಯವಸ್ಥಿತವಾಗಿ ಕಟ್ಟುತ್ತಾರೆ. ರಾಯೇಜಿ& ತೇರಿನ ಗಾಲಿಯ ಕೀಲು ಸ್ವಚ್ಛಗೊಳಿಸಿ ಹರಳೆಣ್ಣೆ ಹಚ್ಚಿ ಗಾಲಿಗಳ ಇರುಸಿಗೆ ಜೋಡಿಸುತ್ತಾರೆ. ಮುಲ್ಲಾ& ತೇರಿನ ಕಳಸ ಶುಚಿಗೊಳಿಸಿ ಮಸೀದಿಯಲ್ಲಿಟ್ಟು ಪೂಜೆ ಸಲ್ಲಿಸಿ ಶ್ರೀ ವೀರಭದ್ರೇಶ್ವರ ದೇವರಿಗೆ ಮುಟ್ಟಿಸುತ್ತಾರೆ.

ದೊಡ್ಡ ತೇರಿನ ಮುಂಭಾಗದಲ್ಲಿ ಸಂಬಾಳ& ಪುರವಂತರು ಒಡಪು ಹೇಳುತ್ತಾ ಸಾಗುತ್ತಾರೆ. ರೊಟ್ಟೆಯ್ಯನವರ& ದೇವರು ಹಿಡಿದುಕೊಂಡು ಸಾಗುತ್ತಾರೆ. ಪರಮನಾಯಕ& ತೇರಿನ ಮುಂದೆ ಖಡ್ಗ ಹಿಡಿದು ನಡೆಯುತ್ತಾರೆ. ಕರಿಕಟ್ಟಿ ಮತ್ತು ಹತ್ತರಕಿ&ವೀರಭದ್ರೇಶ್ವರ ವಿವಿಧ ಕಾರ್ಯಕ್ರಮ ಹಾಗೂ ಪಲ್ಲಕ್ಕಿ ವ್ಯವಸ್ಥೆ ಮಾಡುತ್ತಾರೆ. ಹೀಗೆ ಗ್ರಾಮದ ಒಂದೊಂದು ಮನೆತನದವರು ಒಂದೊಂದು ಭಕ್ತಿಸೇವೆ ಸಲ್ಲಿಸುತ್ತಿರುವುದು ಭಾವಕೈತೆಯ ಸಂಕೇತವಾಗಿದೆ.

ವೀರಭದ್ರೇಶ್ವರ ಮೂರ್ತಿಯನ್ನು ಬೆಳಗ್ಗೆ ಹುಡುಗನ ರೂಪ, ಮಧ್ಯಾಹ್ನ ಯುವಕನ ರೂಪ ಹಾಗೂ ಸಂಜೆ ಅಜ್ಜನ ರೂಪದಲ್ಲಿ ಅಲಂಕರಿಸಿ ಪೂಜಿಸುವ ಸಂಪ್ರದಾಯವಿದೆ. ವೀರಭದ್ರೇಶ್ವರ ಗುಗ್ಗಳೋತ್ಸವ ಸಮಯದಲ್ಲಿ ಗ್ರಾಮದ ಪತ್ತಾರ, ಹುಂಬಿ, ಬಡಿಗೇರ, ವಾಲಿ, ಗುಗ್ಗರಿ, ಹಕ್ಕರಕಿ ಮನೆತನದವರು ಗುಗ್ಗಳ ಹೊಂದಿದ ಉರಿಯ ಕೊಡ ಹಿಡಿದು ಬರುವರು. ವೀರಭದ್ರೇಶ್ವರ ಪೂಜೆಗೆ ಹೂ, ಪತ್ರಿ ನೀಡುವ ಹೂಗಾರ ಹಾಗೂ ಗಣಾಚಾರಿ ಮನೆತನದವರು ಇರುತ್ತಾರೆ. ಛಲವಾದಿ&ಗಂಟೆ ಬಾರಿಸುತ್ತಾರೆ. ಮಡಿವಾಳ&ವೀರಭದ್ರೇಶ್ವರ ಪೂಜೆ ಬಳಿಕ ತೆಗೆದ ಬಟ್ಟೆ ಶುಚಿಗೊಳಿಸುತ್ತಾರೆ. ಬಡಿಕೋಳ, ದಳವಾಯಿ, ಬಾರ್ಕಿ ಹಾಗೂ ತಳವಾರ ಮನೆತನದವರು ತಳೀರು&ತೋರಣ ಕಟ್ಟಿ ದೇವಸ್ಥಾನ ಶೃಂಗರಿಸುಸುವುದು ವಿಶೇಷವಾಗಿದೆ.

"ಪ್ರತಿ ವರ್ಷದಂತೆ ಶ್ರೀ ವೀರಭದ್ರೇಶ್ವರ ಅದ್ದೂರಿ ಜಾತ್ರೆಗೆ ಮಲ್ಲಮ್ಮನ ಬೆಳವಡಿ ಸಾಯಾಗಿದೆ. ಸಹಸ್ರಾರು ಭಕ್ತರ ಭಕ್ತಿಯ ಪುಣ್ಯ ೇತ್ರವಾಗಿದೆ. ಕಳೆದ ಐದು ವರ್ಷಗಳಿಂದ ಜಾತ್ರೆಯಲ್ಲಿ ಒಂದು ದಿನ ಅನ್ನ ಪ್ರಸಾದ ಸೇವೆ ಮಾಡುತ್ತಿದ್ದೇನೆ. ನನಗೆ ಸಂತಸ, ತೃಪ್ತಿ ತಂದಿದೆ".

> ಸುನೀಲ ವರ್ಣೇಕರ, ಉದ್ಯಮಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net