ವೀರಭದ್ರೇಶ್ವರ ಸ್ವಾಮಿ ಭಾವಚಿತ್ರ ಮೆರವಣಿಗೆ

Karadagi Veerabhadreshwar Swami
Published on

ಸವಣೂರ: ಉದ್ಭವ ಶ್ರೀ ವೀರಭದ್ರೇಶ್ವರ ಕ್ಷೇತ್ರ ಕಾರಡಗಿಯಲ್ಲಿ ವೀರಭದ್ರೇಶ್ವರ ಜಯಂತ್ಯುತ್ಸವ ನಿಮಿತ್ತ ವೀರಭದ್ರೇಶ್ವರ ಸ್ವಾಮಿಗೆ ಗುರುವಾರ ಬೆಳಗ್ಗೆ ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ಕೈಗೊಳ್ಳಲಾಯಿತು.

ವೀರಗಾಸೆ ಮತ್ತು ವೀರಭದ್ರೇಶ್ವರ ಭಾವಚಿತ್ರ ಮೆರವಣಿಗೆ ಗ್ರಾಮದ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನಕ್ಕೆ ತಲುಪಿತು. ನಂತರ ಮಹಾಮಂಗಳಾರತಿ, ಪ್ರಸಾದ ಸೇವೆ ನಡೆಯಿತು. ಸಂತೋಷಕುಮಾರಯ್ಯ ಶಾಸ್ತ್ರಿ, ವೀರಯ್ಯ ಪೂಜಾರ ನೇತೃತ್ವ ವಹಿಸಿದ್ದರು. ದೇವಸ್ಥಾನ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net