ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಸಂಪನ್ನ

03
ಅನಂತಪುರ ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಪಲ್ಲಕ್ಕಿ ಉತ್ಸವ ಜರುಗಿತು. ಸಿದ್ದರಾಮಯ್ಯ ಮಠಪತಿ, ಮತ್ಯುಂಜಯ ಹಿರೇಮಠ, ರುದ್ರಗೌಡ ಪಾಟೀಲ, ಅರ್ಜುನ ಬಡಿಗೇರ ಇತರರಿದ್ದರು.
Published on

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಅನಂತಪುರ ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವವು ಮಂಗಳವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಜರುಗಿತು.

ಬೆಳಗ್ಗೆ ವೀರಭದ್ರೇಶ್ವರ ದೇವರ ಮೂರ್ತಿಗೆ ರುದ್ರಾಭಿಷೇಕ, ವಿಶೇಷ ಅಲಂಕಾರ ಪೂಜೆ ನೆರವೇರಿಸಲಾಯಿತು. ಸಹಸ್ರಾರು ಭಕ್ತರು ದೇವರಿಗೆ ನೈವೇದ್ಯ ಅರ್ಪಿಸಿ ದರ್ಶನ ಪಡೆದರು. ವೀರಭದ್ರೇಶ್ವರ ದೇವರ ಮೂರ್ತಿ ಪಲ್ಲಕ್ಕಿಯಲ್ಲಿಟ್ಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಕಲ್ಪಿಸಲಾಯಿತು. ಮಧ್ಯಾಹ್ನ ಪುರವಂತರು ವಿವಿಧ ಶಸಗಳನ್ನು ಚುಚ್ಚಿಕೊಂಡರು. ಕುಣಿತದ ಮೂಲಕ ವೀರಭದ್ರನ ಸ್ತುತಿಸಿದರು.

ಗುರುಪಾದ ಹಿರೇಮಠ, ಸಿದ್ದರಾಮಯ್ಯ ಮಠಪತಿ, ಮೃತ್ಯುಂಜಯ ಹಿರೇಮಠ, ರುದ್ರಗೌಡ ಪಾಟೀಲ, ಅರ್ಜುನ ಬಡಿಗೇರ, ಸಂಗಪ್ಪ ಜಾಬಗೌಡರ, ಪ್ರದೀಪ ಪಾಟೀಲ, ದತ್ತಾತ್ರೆಯ ಬಡಿಗೇರ, ಅಪ್ಪಾಸಾಬ ಮದಬಾವಿ, ಸಿದರಾಯ ಜತ್ತಿ, ಮಾಲಪ್ಪ ಬಡಿಗೇರ, ಗುರುಶಾಂತ ಮದಬಾವಿ, ಪ್ರವೀಣ ಪಾಟೀಲ, ಸುರೇಶ ಬಡಿಗೇರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net