

ನರೇಗಲ್ಲ: ಪಟ್ಟಣದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಬೆಳಿಗ್ಗೆ ವೀರಭದ್ರೇಶ್ವರ ದೇವರಿಗೆ ಮಹಾರುದ್ರಾಭಿಷೇಕ ವಿಶೇಷ ಪೂಜೆ, ವೀರಭದ್ರೇಶ್ವರ ಗುಗ್ಗಳ ಕಾರ್ಯಕ್ರಮ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಪ್ರಸನ್ನಗೊಂಡಿತು. ದೇವಸ್ಥಾನದ ಆವರಣದಿಂದ ಗುಗ್ಗಳ ಕೊಡ ಹೊತ್ತು ಭಕ್ತರು ಪಲ್ಲಕ್ಕಿಯಲ್ಲಿ ವೀರಭದ್ರೇಶ್ವರ ಮೂರ್ತಿಯನಿಟ್ಟು ಮೆರವಣಿಗೆ ಸಾಗಿತು. ಮೆರವಣಿಗೆಯು ಸಕಲ ವಾದ್ಯ ವೃಂದಗಳೊಂದಿಗೆ ಗಣೇಶ ದೇವಸ್ಥಾನ, ಮಾರುತಿ ದೇವಸ್ಥಾನದ ಮೂಲಕ ವೀರಣ್ಣನ ಪಾದಗಟ್ಟಿಗೆ ತುಲುಪಿತು. ಪುರವಂತರು ದೇವರ ಮಹಿಮೆ, ಸಂಸ್ಕೃತಿ, ಧರ್ಮ ಸೇರಿ ಪೌರಾಣಿಕ ಒಡಪುಗಳ ಮೂಲಕ ಕೈಯಲ್ಲಿ ಖಡ್ಗ ಹಿಡಿದು ಝಳಪಿಸಿ ಪುರವಂತಿಕೆ ಕಲೆ ಪ್ರದರ್ಶಿಸಿದರು. ಭಕ್ತರು ಬಾಯಿ, ನಾಲಿಗೆ ಮೇಲೆ ಶಸ್ತ್ರ ಹಾಕಿಸಿಕೊಂಡರು.