ವೀರಭದ್ರೇಶ್ವರ ಅಗ್ನಿ ಮಹೋತ್ಸವ ಅದ್ದೂರಿ

HDL Jatre
ಹಿರೇಹಡಗಲಿಯಲ್ಲಿ ಗುರುವಾರ ಅಗ್ನಿ ಮಹೋತ್ಸವದಲ್ಲಿ ಸಾಗಿದ ವೀರಭದ್ರೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವ.
Published on

ಹೂವಿನಹಡಗಲಿ: ತಾಲೂಕಿನ ಹೊಳಲು ಹಾಗೂ ಹಿರೇಹಡಗಲಿಯಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ಅಗ್ನಿ ಮಹೋತ್ಸವ ಸಂಭ್ರಮ ಸಡಗರದಿಂದ ಗುರುವಾರ ಜರುಗಿತು.

ಹಿರೇಹಡಗಲಿ ಗ್ರಾಮದಲ್ಲಿ ಸ್ವಾಮಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಕೊಟ್ಟೂರೇಶ್ವರ ದೇಗುಲದ ಬಳಿಯಿರುವ ಬಾವಿಗೆ ಕರೆತಂದು ಗಂಗೆ ಪೂಜೆ ನೆರವೇರಿಸಲಾಯಿತು. ಸಮಾಳ, ನಂದಿಕೋಲು ಹಾಗೂ ವಿವಿಧ ಬಗೆಯ ಮಂಗಳವಾದ್ಯಗಳು, ಪುರವಂತರ ಕುಣಿತ, ವೀರಭದ್ರೇಶ್ವರ ಒಡಪುಗಳು ಮೆರವಣಿಗೆಗೆ ಮೆರುಗು ನೀಡಿದವು.

ದೇಗುಲದ ಮುಂಭಾಗದಲ್ಲಿ ಹಾಕಿದ್ದ ಅಗ್ನಿ ಕುಂಡವನ್ನು ಭಕ್ತರು ಹಾಯ್ದು ಹರಕೆ ತೀರಿಸಿದರು. ಹೊಳಲು ಗ್ರಾಮದಲ್ಲಿ ಬುಧವಾರ ಸಂಜೆ ಭಕ್ತರ ಸಮ್ಮುಖದಲ್ಲಿ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಜರುಗಿತು. ಗುರುವಾರ ಬೆಳಗ್ಗೆ ಹರಕೆ ಹೊತ್ತ ಭಕ್ತರು ಅಗ್ನಿಕುಂಡವನ್ನು ಪ್ರವೇಶಿಸುವ ಮೂಲಕ ಹರಕೆ ತೀರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net