ವೀರಭದ್ರ ಸ್ವಾಮಿ ರಥೋತ್ಸವ ಸಂಪನ್ನ

23Koppa02
ಕೋಪದ ವೀರಭದ್ರ ಸ್ವಾಮಿಯ ರಥೋತ್ಸವ ವೈಭವದಿಂದ ನಡೆಯಿತು.
Published on

ಕೊಪ್ಪ: ಪಟ್ಟಣದ ಕೋಪದ ಶ್ರೀ ವೀರಭದ್ರ ಸ್ವಾಮಿ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು. ಬೆಳಗ್ಗೆ ವಿಶೇಷ ಪೂಜೆ, ಕೆಂಡದಾರ್ಚನೆ, ಪುಷ್ಪಾಕಾರೋಹಣ ನಡೆಯಿತು. ಮಧ್ಯಾಹ್ನ ಶ್ರೀಮನ್ ಮಹಾ ರಥಾರೋಹಣ ನೆರವೇರಿತು. ಭಕ್ತರು ರಥಕ್ಕೆ ದವಸ, ಧಾನ್ಯಗಳನ್ನು ಎರಚಿ ರಥ ಎಳೆದು ಸಂಭ್ರಮಿಸಿದರು. ದೇವರಿಗೆ ಹೂವಿನ ವಿಶೇಷ ಅಲಂಕಾರ ಮಾಡಲಾಗಿತ್ತು. ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಸೋಮವಾರ ರುದ್ರಾಭಿಷೇಕ ನೆರವೇರಿತು. 24ರಂದು ಬೆಳಿಗ್ಗೆ 9 ಗಂಟೆಗೆ ಕುಂಕುಮೋತ್ಸವ, ಅವಭ್ರತ ಸ್ನಾನ, ಸಂಜೆ 6.30ಕ್ಕೆ ಪಲ್ಲಕ್ಕಿ ಉತ್ಸವ ನಡೆಯಲಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net