

ವಿಜಯಪುರ: ವೀರ ಸಾವರ್ಕರ್ ಬ್ರಿಟೀಷರ ಕಡು ವಿರೋಧಿಯಾಗಿದ್ದರು. ಅಪ್ರತಿಮ ದೇಶ ಭಕ್ತ, ಕ್ರಾಂತಿಕಾರಿ, ಶ್ರೇಷ್ಠ ಚಿಂತಕ, ಕವಿ, ಲೇಖಕ ದೂರದೃಷ್ಟಿಯ ಸಾಮಾಜಿಕ ಹಾಗೂ ರಾಜಕೀಯ ನೇತಾರ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಮಂಗಳವಾರ ಚಿಂತಕರ ಚಾವಡಿ ಬಳಗದ ವತಿಯಿಂದ ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್ರ 141 ನೇ ಜಯಂತಿ ನಿಮಿತ್ತ ‘ವೀರ ಸಾವರ್ಕರ್ ವಾದಗಳ ಸೆರೆ ಬಿಡಿಸಿ’ ಎಂಬ ಪುಸ್ತಕ ಬಿಡುಗಡೆ ಸ್ವೀಕರಿಸಿ ಅವರು ಮಾತನಾಡಿದರು.
ಸಾವರ್ಕರ್ ಅವರು ಹಿಂದು ಮಹಾಸಭಾದ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಹಿಂದು-ಮುಸ್ಲಿಂರು ಸಿಂಧ ಪ್ರಾಂತದಲ್ಲಿ ಸ್ಥಳೀಯ ಸರ್ಕಾರ ಸ್ಥಾಪಿಸಿ ಮಾದರಿಯ ಆಡಳಿತ ನೀಡಿದರು. ದೇಶಕ್ಕಾಗಿ 50 ವರ್ಷ ಖೈದಿಯಾಗಿ ಶಿಕ್ಷೆ ಅನುಭವಿಸಿದ ವೀರ ಸಾವರ್ಕರ್ರ ಹೋರಾಟ ಅಲ್ಲಗಳೆಯುವಂತಿಲ್ಲ. ನೀರು, ಅನ್ನ, ಔಷಧ ತ್ಯಜಿಸಿ ಪ್ರಾಣ ನೀಡಿದರು. ಅನೇಕ ಪ್ರಕರಣಗಳಲ್ಲಿ ಬ್ರಿಟೀಷ್ ಸರ್ಕಾರ ಹಾಗೂ ಭಾರತ ಸರ್ಕಾರ ಇವರನ್ನು ಆರೋಪ ಮುಕ್ತರನ್ನಾಗಿ ಮಾಡಿದವು ಎಂದರು.
ಮಂಥನ ಸದಸ್ಯರಾದ ರಘೋತ್ತಮ ಅರ್ಜುಣಗಿ ಮಾತನಾಡಿ, ಬ್ರಿಟೀಷ್ ಸರ್ಕಾರ ವಿನಾಕಾರಣ ವೀರ ಸಾವರ್ಕರ್ ಆರೋಪಿಸಿ ಬಂಧಿಸಿದೆ. ಪುನರ್ ಪರಿಶೀಲಿಸಬೇಕೆಂದು ಅರ್ಜಿ ಸಲ್ಲಿಸಿದ್ದು ಸಹಜವಾದ ಹಕ್ಕು. ಆದರೆ ಬ್ರಿಟೀಷರು ಅವರ ಮನವಿ ತಿರಸ್ಕರಿಸಿದ್ಧರಿಂದ 50 ವರ್ಷ ಕಠಿಣ ಶಿಕ್ಷೆ ಅನುಭವಿಸಿದರು ಎಂದರು.
ಚನ್ನಬಸು ಕೋರಿ, ಬಸವರಾಜ ದಂಡೋತಿ, ಮನೀಷಾ ಕುಲಕರ್ಣಿ ಮತ್ತಿತರರಿದ್ದರು.