ಮೇ 15ರಂದು ಶ್ರೀರಂಗಪಟ್ಟಣದಲ್ಲಿ ಪಾದಯಾತ್ರೆ: ರಾಜ ವೀರ ಮದಕರಿ ನಾಯಕ ಸ್ಮಾರಕ ನಿರ್ಮಾಣ ವೇದಿಕೆ ರಾಜ್ಯ ಸಂಚಾಲಕ ಪ್ರಸನ್ನ ಮಾಹಿತಿ

Veera Madkari Nayak Memorial Construction Forum press conference Mandya
Published on

ಮಂಡ್ಯ: ವೀರ ಮದಕರಿ ನಾಯಕರ ಪುಣ್ಯಸ್ಮರಣೆಯ ಹಿನ್ನಲೆ ಶ್ರೀರಂಗಪಟ್ಟಣ ತಾಲೂಕಿನ ಪಶ್ಚಿಮವಾಹಿನಿಯಲ್ಲಿ ಮದಕರಿ ನಾಯಕರ ಸ್ಮಾರಕ ನಿರ್ಮಾಣಕ್ಕೆ ಒತ್ತಾಯಿಸಿ ಮೇ 15ರಂದು ಬೆಳಗ್ಗೆ 10 ಗಂಟೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ ವೀರ ಮದಕರಿ ನಾಯಕ ಸ್ಮಾರಕ ನಿರ್ಮಾಣ ವೇದಿಕೆ ರಾಜ್ಯ ಸಂಚಾಲಕ ಪ್ರಸನ್ನ ತಿಳಿಸಿದರು.

ಮದಕರಿ ನಾಯಕರ ಸಮಾಧಿಯಾದ ಸ್ಥಳಗಳನ್ನು ಸಂರಕ್ಷಣೆ ಮಾಡಿ, ಅವರ ಸಾಧನೆಯ ಕುರುಹುಗಳು ಇರುವಲ್ಲಿ ಸ್ಮಾರಕ ನಿರ್ಮಿಸಲು ಸರ್ಕಾರವನ್ನು ಒತ್ತಾಯಿಸುವುದು ವೇದಿಕೆಯ ಧ್ಯೇಯವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮದಕರಿ ನಾಯಕರು ಶ್ರೀರಂಗಪಟ್ಟಣದಲ್ಲಿ ನಿಧನರಾದ ಹಿನ್ನಲೆ ಪಶ್ಚಿಮವಾಹಿನಿಯಲ್ಲಿ ಅವರ ಸ್ಮಾರಕ ನಿರ್ಮಿಸುವಂತೆ ತಾಲೂಕು ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಶ್ರೀರಂಗಪಟ್ಟಣದಿಂದ ಪಶ್ಚಿಮ ವಾಹಿನಿಯವರಗೆ ಪಾದಯಾತ್ರೆ ಮೂಲಕ ತೆರಳಿಗೆ ಮಧ್ಯಾಹ್ನ 12 ಗಂಟೆಗೆ ದೊರೆಗಳ ಪುಣ್ಯಸ್ಮರಣೆ ಮಾಡಲಾಗುವುದು ಎಂದು ವಿವರಿಸಿದರು.

ಬಜರಂಗದಳದ ರಾಜ್ಯಾಧ್ಯಕ್ಷ ಮಂಜುನಾಥ್, ಜೈ ಮಾರುತಿ ಸೇವಾಟ್ರಸ್ಟ್ ಜಿಲ್ಲಾಧ್ಯಕ್ಷ ಮಾದೇಗೌಡ, ಶ್ರೀರಂಗಪಟ್ಟಣ ಪುರಸಭೆ ಸದಸ್ಯ ವಿ.ಶ್ರೀನಿವಾಸ್, ವೇದಿಕೆಯ ರಂಗಸ್ವಾಮಿ ನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net