

11ರಂದು ಸುರತ್ಕಲ್ನಲ್ಲಿ ವೀರಕೇಸರಿ ಟ್ರೋಫಿ
ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾಟ
ಮಂಗಳೂರು : ವೀರ ಕೇಸರಿ ತಡಂಬೈಲ್ ,ಸುರತ್ಕಲ್ ಇದರ ವತಿಯಿಂದ ಡಾ.ಮಂಜಯ್ಯ ಶೆಟ್ಟಿ ಗುಂಡಿಲಗುತ್ತು ಹಾಗೂ ಮಾಜಿ
ಮೇಯರ್ ರಜನಿ ದುಗ್ಗಣ್ಣ ಅವರ ಸ್ಮರಣಾರ್ಥ ಪುರುಷರ ಮುಕ್ತ ರಾಷ್ಟ್ರೀಯ ಮಟ್ಟದ ಆಹ್ವಾನಿತ ತಂಡಗಳ ವೀರಕೇಸರಿ ಟ್ರೋಫಿ -2025 ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಜ.11ರಂದು ಸಾಯಂಕಾಲ 4ರಿಂದ ಸುರತ್ಕಲ್ ಬಂಟರ ಭವನದ ಬಳಿ ನಡೆಯಲಿದೆ.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಬಿಎಎಸ್‌ಎಫ್‌ನ ನಿರ್ದೇಶಕ ಶ್ರೀನಿವಾಸ್ ಪ್ರಾಣೇಶ್ ವಹಿಸಲಿದ್ದಾರೆ.
ಇಂಡಿಯನ್ ನೇವಿ, ಇಂಡಿಯನ್ ಆರ್ಮಿ, ಸಿಐಎಸ್‌ಎಫ್ ರಾಂಚಿ, ಕೇರಳ ಕಸ್ಟಮ್ಸ್, ಡೇಂಜರ್ ಬಾಯ್ಸ್, ಪಂಜ ಫ್ರೆಂಡ್ಸ್ ತಂಡಗಳು ಭಾಗವಹಿಸಲಿದೆ. ವಿಜೇತರಿಗೆ ಪ್ರಥಮ 77,777 ರೂ., ದ್ವಿತೀಯ 55,555 ರೂ., ತೃತೀಯ 22,222 ರೂ. ಚತುರ್ಥ 11,111 ರೂ. ನಗದು ಸಹಿತ ವೀರಕೇಸರಿ ಟ್ರೋಫಿ ನೀಡಲಾಗುವುದೆಂದು ಪ್ರಕಟಣೆ ತಿಳಿಸಿದೆ.