ಧರ್ಮ ರಕ್ಷಣೆಯೇ ಬಿಜೆಪಿ ಧ್ಯೇಯ: ರಾಷ್ಟ್ರೀಯ ವೀರ ಬಾಲ ದಿವಸ ಆಚರಣೆ ಸಮಿತಿಯ ಸಂಚಾಲಕ ಸತೀಶ್ ಹೇಳಿಕೆ

Veera Bala Divas mandya
Published on

ಮಂಡ್ಯ: ಹಿಂದುಗಳು ಎಂದಿಗೂ ಬೇರೆ ಧರ್ಮದ ಮೇಲೂ ಆಕ್ರಮಣ ಮಾಡಿಲ್ಲ ಎಂದು ರಾಷ್ಟ್ರೀಯ ವೀರ ಬಾಲ ದಿವಸ ಆಚರಣೆ ಸಮಿತಿ ಸಂಚಾಲಕ ಸತೀಶ್ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವೀರ ಬಾಲ ದಿವಸ ಆಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ವಿಪಕ್ಷಗಳು ಬಿಜೆಪಿಯಲ್ಲಿ ಕೋಮುದಾದಿ ಎಂದು ಆರೋಪ ಮಾಡುತ್ತಲೇ ಇವೆ. ಆದರೆ ಬಿಜೆಪಿ ಎಂದೂ ಯಾವುದೇ ಕೋಮುವಾದವನ್ನೂ ಬೆಂಬಲಿಸಿಲ್ಲ. ಯಾರನ್ನೂ ಬಲವಂತವಾಗಿ ಮತಾಂತರನ್ನೂ ಮಾಡಿಲ್ಲ. ಆದರೆ ಧರ್ಮ-ಧರ್ಮಗಳ ರಕ್ಷಣೆಯೇ ನಮ್ಮ ಧ್ಯೇಯ ಎಂದು ನುಡಿದರು.

ಬಿಜೆಪಿ ಕೋಮುವಾದಿ ಅಲ್ಲ ಎನ್ನುವುದಕ್ಕೆ ಸಿಖ್ ಧರ್ಮದ ವೀರತ್ವದ ತ್ಯಾಗ ಬಲಿದಾನವನ್ನು ಸ್ಮರಿಸಿಕೊಳ್ಳುತ್ತಿರುವುದು ಉದಾರಣೆಯಾಗಿದೆ. ರಾಷ್ಟ್ರೀಯ ವೀರ ಬಾಲ ದಿವಸ ಆಚರಣೆ ಮಾಡುತ್ತಾ ಧರ್ಮ ರಕ್ಷಣೆಗಾಗಿ ಬಲಿದಾನವಾದ ಗುರು ಗೋವಿಂದ ಸಿಂಗ್ ಮಕ್ಕಳನ್ನು ಸ್ಮರಿಸಿಕೊಳ್ಳುವುದು ಸಾಕ್ಷಿಯಾಗಿದೆ ಎಂದ ಅವರು, ಮೊಘಲ್ ಅರಸರಿಂದ ಗಲ್ಲಿಗೇರಿಸಲ್ಪಟ್ಟ 10ನೇ ಸಿಖ್ ಗುರು ಗೋವಿಂದ ಸಿಂಗ್ ಅವರ ನಾಲ್ವರು ಪುತ್ರರ ಸ್ಮರಣಾರ್ಥವಾಗಿ ಡಿ.26ಅನ್ನು ’ವೀರ್ ಬಾಲ ದಿವಸ್’ ಎಂದು ಆಚರಿಸುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಳೆದ ವರ್ಷ ಘೋಷಿಸಿದ್ದರು. ಅದರಂತೆ ಈ ಬಾರಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ನುಡಿದರು.

ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ನಗರ ಮೋರ್ಚಾ ಅಧ್ಯಕ್ಷ ವಿವೇಕ್, ಜಿಲ್ಲಾ ಕಾರ್ಯದರ್ಶಿಗಳಾದ ಅಂಕಪ್ಪ, ಹರ್ಷ, ನಗರಸಭಾ ಮಾಜಿ ಸದಸ್ಯರಾದ ಚಂದ್ರ, ಪ್ರಸನ್ನ, ಶಿವಕುಮಾರ್ ಕೆಂಪಯ್ಯ, ಶಿವಲಿಂಗು, ಮಾಧ್ಯಮ ವಕ್ತಾರ ಸಿ.ಟಿ.ಮಂಜುನಾಥ್, ತಾಲೂಕು ಅಧ್ಯಕ್ಷ ಶಿವಕುಮಾರ್ ಆರಾಧ್ಯ, ವಕೀಲ ಕಾಂತ್ರಿಮಂಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net