ಹೊರ ರಾಜ್ಯದ ಯುವಕರ ಮೇಲೆ ಅಮಾನುಷ ಹಲ್ಲೆ

mng---29 march Halle
Published on

ಮಂಗಳೂರು: ಹೊರವಲಯದ ಅರ್ಕುಳ ಎಂಬಲ್ಲಿ ಹೊರ ರಾಜ್ಯದ ಯುವಕನೊಬ್ಬನ ಮೇಲೆ ಮನೆ ಮಂದಿ ಅಮಾನುಷವಾಗಿ ಹಲ್ಲೆ ನಡೆಸುವ ಸಿಸಿ ಕ್ಯಾಮರಾ ದೃಶ್ಯದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಮಂಗಳೂರು ಗ್ರಾಮಾಂತರ ಪೊಲೀಸರು ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸುತ್ತಿದ್ದಾರೆ. ಮನೆ ಮಂದಿ ಹೊರ ರಾಜ್ಯದ ಯುವಕನಿಗೆ ಬೆಲ್ಟ್ ಹಾಗೂ ಸ್ಟೂಲ್‌ನಲ್ಲಿ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದೆ. ಕಳವು ಮಾಡಿದ ಹಣ ಮತ್ತು ಚಿನ್ನ ಎಲ್ಲಿದೆ? ಎಂದು ಯುವಕನಲ್ಲಿ ಪ್ರಶ್ನಿಸುತ್ತಿರುವುದು ವಿಡಿಯೋ ತುಣುಕಿನಲ್ಲಿ ಕಂಡು ಬಂದಿದೆ. ತುಳು, ಹಿಂದಿಯಲ್ಲಿ ಮನೆ ಮಂದಿ ಮಾತನಾಡುತ್ತಿದ್ದು, ಏಟು ತಿನ್ನುತ್ತಾ ಯುವಕ ತನ್ನ ಮೇಲಿನ ಆರೋಪಕ್ಕೆ ಹಿಂದಿ ಭಾಷೆಯಲ್ಲಿ ಉತ್ತರಿಸುತ್ತಿರುವ ಮಾತು ಕೇಳುತ್ತಿದೆ.


ಮನೆಯದೇ ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು ಮನೆಯ ಇಬ್ಬರು ಸದಸ್ಯರು ಸೇರಿ ಹಲ್ಲೆ ನಡೆಸುತ್ತಿದ್ದಾರೆ. ಹಲ್ಲೆಗೊಳಗಾದ ಯುವಕನ ಜೊತೆಗಿರುವ ವ್ಯಕ್ತಿಗೂ ಹಲ್ಲೆ ನಡೆಸಲಾಗಿದೆ. ಹಲ್ಲೆಗೊಳಗಾದ ಯುವಕರು ಅವರ ಊರಿಗೆ ತೆರಳಿದ್ದು, ಘಟನೆ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಮಾನುಷವಾಗಿ ಹಲ್ಲೆ ಮಾಡಿರುವುದರ ವಿರುದ್ಧ ಸಾರ್ವಜನಿಕರಲ್ಲಿ ವಿರೋಧ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net