ಅಪರೂಪದ ರಾಜಕಾರಣಿ ನಡಹಳ್ಳಿ

Vedic Foundation, Girishabhat Joshi, Muddebihala, A.S.Patila Nadahalli, Operation,
ಶಸಚಿಕಿತ್ಸೆಯಿಂದ ಗುಣಮುಖರಾಗುತ್ತಿರುವ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಅವರನ್ನು ತಾಳಿಕೋಟೆ ತಾಲೂಕು ವೈದಿಕ ಪ್ರತಿಷ್ಠಾನ ಸಂಘದ ಪುರೋಹಿತರು ಮಂತ್ರಘೋಷಗಳೊಂದಿಗೆ ಸನ್ಮಾನಿಸಿದರು. ಗಿರೀಶಭಟ್ ಜೋಶಿ, ಸಂತೋಷಭಟ್ ಜೋಶಿ, ವೆಂಕಟೇಶ ಗ್ರಾಮಪುರೋಹಿತ, ವಸಂತ ಜೋಶಿ, ಅಶೋಕ ಜೋಶಿ, ನಿಂಗರಾಜ ಕುಂಟೋಜಿ, ಶಿವಶಂಕರ ಹಿರೇಮಠ ಇನ್ನಿತರರು ಇದ್ದಾರೆ.
Published on

ಮುದ್ದೇಬಿಹಾಳ: ನಡಹಳ್ಳಿಯ ಅವರಂತಹ ಅಭಿವೃದ್ಧಿಪರ ರಾಜಕಾರಣಿಗಳು ಸಿಗುವುದು ಅಪರೂಪ ಎಂದು ತಾಳಿಕೋಟೆ ತಾಲೂಕು ವೈದಿಕ ಪ್ರತಿಷ್ಠಾನದ ಅಧ್ಯಕ್ಷ ಗಿರೀಶಭಟ್ ಜೋಶಿ ಹೇಳಿದರು.

ಮಾರುತಿ ನಗರದ ಅಂಚಿನಲ್ಲಿರುವ ನಡಹಳ್ಳಿ ಅವರ ಾರ್ಮಹೌಸ್‌ನಲ್ಲಿ ಶಸ ಚಿಕಿತ್ಸೆಯ ನಂತರ ವಿಶ್ರಾಂತಿ ಪಡೆಯುತ್ತಿರುವ ಮಾಜಿ ಶಾಸಕ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿಯ ಆರೋಗ್ಯ ಗುರುವಾರ ವಿಚಾರಿಸಿ, ಮಂತ್ರಘೋಷಗಳ ಸಮೇತ ಅವರನ್ನು ಸನ್ಮಾನಿಸಿ ಮಾತನಾಡಿ, ಭವಿಷ್ಯದಲ್ಲಿ ನಡಹಳ್ಳಿಯವರಿಗೆ ಮತ್ತೆ ಜನರ ಸೇವೆ ಮಾಡುವ ಶಕ್ತಿಯನ್ನು ಭಗವಂತ ಕರುಣಿಸಲಿದ್ದಾನೆ ಎಂದರು.

ಮತಕ್ಷೇತ್ರದ ಜನತೆ ಅವರನ್ನು ಕಳೆದ ಚುನಾವಣೆಯಲ್ಲಿ ಸೋಲಿಸಿ ತಪ್ಪು ಮಾಡಿದ್ದಾರೆ. ತಮ್ಮ ತಪ್ಪಿನ ಅರಿವು ಉಂಟಾಗಿ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ. ಕ್ಷಣಿಕ ಆಸೆ, ಆಮಿಷಗಳಿಗೆ ಬಲಿಯಾಗಿ ಪ್ರಗತಿಪರ ನಿಲುವು ಹೊಂದಿದ್ದ ಅಭಿವೃದ್ಧಿಪರ ರಾಜಕಾರಣಿಯೊಬ್ಬರನ್ನು ಕಳೆದುಕೊಳ್ಳುವುದರ ಲ ಏನು ಅನ್ನೋದು ನಮ್ಮ ಜನತೆಗೆ ಈಗ ಗೊತ್ತಾಗತೊಡಗಿದೆ ಎಂದರು.

ತಮ್ಮ ಶಸಚಿಕಿತ್ಸೆಯ ವಿವರ ಬಿಡಿಸಿಟ್ಟ ನಡಹಳ್ಳಿಯವರು, ಬಹಳ ವರ್ಷಗಳಿಂದಲೂ ತಿರುಗಾಡುವಾಗ ಕಾಲಿನಲ್ಲಿ ಬಹಳಷ್ಟು ನೋವು ಬರುತ್ತಿತ್ತು. ಆದರೂ ಸಹಿಸಿಕೊಂಡು ನನ್ನ ಜನತೆಗಾಗಿ, ಅಭಿವೃದ್ಧಿಗಾಗಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗಾಡಿದೆ. ಮತಕ್ಷೇತ್ರದಲ್ಲಿ ನನ್ನಷ್ಟು ತಿರುಗಾಡಿದ ರಾಜಕಾರಣ ಇನ್ನೊಬ್ಬರಿಲ್ಲ. ಆದರೀಗ ಜನತೆ ನನಗೆ 5 ವರ್ಷ ವಿಶ್ರಾಂತಿ ನೀಡಿದ್ದರಿಂದ ಶಸಚಿಕಿತ್ಸೆ ಮಾಡಿಸಿಕೊಂಡು ಮತ್ತೆ ಮುಂದಿನ ಚುನಾವಣೆಗೆ ತಯಾರಾಗತೊಡಗಿದ್ದೇನೆ ಎಂದರು.

ಸಂತೋಷಭಟ್ ಜೋಶಿ, ವೆಂಕಟೇಶ ಗ್ರಾಮಪುರೋಹಿತ, ವಸಂತ ಜೋಶಿ, ಅಶೋಕ ಜೋಶಿ, ಭೀಮಾಶಂಕರ ಜೋಶಿ, ರವಿಆಚಾರ್ಯ ಜೋಶಿ, ಅವಿನಾಶ ಜೋಶಿ, ಗುಂಡುಆಚಾರ್ಯ ಜೋಶಿ, ಯಲಗೂರೇಶ ಚಬನೂರ, ದೀಪಕಭಟ್ ಕುಲಕರ್ಣಿ, ತಾಳಿಕೋಟೆ ಪುರಸಭೆ ಸದಸ್ಯ ನಿಂಗರಾಜ ಕುಂಟೋಜಿ, ಮುಖಂಡ ಶಿವಶಂಕರ ಹಿರೇಮಠ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net