

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆಯ ರೇಣುಕಾನಗರದ ಶ್ರೀ ಶೃಂಗೇರಿ ಶಾರದಾ ಪೀಠಂ ಶಾಖಾ ಮಠದಲ್ಲಿ ವೇದ ಪಠಣ ತರಗತಿಯ ಸಮಾರೋಪ ಸಮಾರಂಭ ಇತ್ತೀಚೆಗೆ ನೆರವೇರಿತು.
ಗುರುವಂದನೆ ಸ್ವೀಕರಿಸಿ ಮಾತನಾಡಿದ ಮನೋಹರ ಪಾಟೀಲ, ವೇದಗಳ ಅಧ್ಯಯನದ ಮಹತ್ವ, ಪಠಣದಿಂದ ಆಗುವ ಪ್ರಯೋಜನ ಮತ್ತು ಮಹತ್ವ ಕುರಿತು ತಿಳಿಸಿದರು.
ಮುಖ್ಯ ಅರ್ಚಕ ವಿನೋದ ಕುಲಕರ್ಣಿ, ಗುರುಮಾತೆ ನಳಿನಿ ಪಾಟೀಲ, ವಿದ್ಯಾರ್ಥಿಗಳು ಇದ್ದರು.