ಮತಾಂಧರಿಗೆ ರಾಜ್ಯ ಸರ್ಕಾರದ ಕೃಪಾಕಟಾಕ್ಷ : ಶಾಸಕ ವೇದವ್ಯಾಸ ಕಾಮತ್ ಆಕ್ರೋಶ

allwyn_130820_kamath
Published on


ಮಂಗಳೂರು : ಕಾಂಗ್ರೆಸ್ ಆಡಳಿತಕ್ಕೆ ಬಂದ ಮೇಲೆ ಮತಾಂಧರ ಹಾವಳಿ ಹೆಚ್ಚಾಗಿದ್ದು ಈಗ ಹಿಂದುಗಳು ನೆಮ್ಮದಿಯಾಗಿ ಹಬ್ಬ ಆಚರಿಸಲು ಆತಂಕ ಪಡುವ ಸ್ಥಿತಿಗೆ ಬಂದಿದೆ. ಮತಾಂಧರಿಗೆ ಕಾಂಗ್ರೆಸ್ ಸರ್ಕಾರದ ಕೃಪಾ ಕಟಾಕ್ಷ ಇರುವುದು ರಾಜ್ಯದ ದುರಂತ ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದ್ದಾರೆ.
ಮಂಡ್ಯದ ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ವೇಳೆ ನಡೆದ ಗಲಭೆಯು ಪೂರ್ವಯೋಜಿತ ಕೃತ್ಯ. ಆದರೆ ಸರ್ಕಾರವೇ ಇದೊಂದು ಸಣ್ಣ ಘಟನೆ, ಆಕಸ್ಮಿಕ ಘಟನೆ ಎಂದು ಮುಚ್ಚಿ ಹಾಕಲು ಯತ್ನಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ನಮ್ಮನ್ನು ಕೊಲ್ಲಲೂ ಸಹ ಮುಂದಾಗಿದ್ದರು ಎಂದು ಸ್ವತಃ ಅಲ್ಲಿನ ಪೊಲೀಸರೇ ಹೇಳುತ್ತಿದ್ದರೆ, ಸರ್ಕಾರ ಮತಾಂಧರ ಪರ ವಹಿಸಿದೆ. ಗಣೇಶೋತ್ಸವ
ಆಚರಿಸಿರುವ ಆಯೋಜಕರನ್ನೇ ಗಲಭೆಯ ಪ್ರಮುಖ ಆರೋಪಿಗಳನ್ನಾಗಿಸಿರುವುದು ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿ ಹಿಂದುಗಳು ಎಂತಹ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net