

ಹುಬ್ಬಳ್ಳಿ: ನಗರದ ಕುಸುಗಲ್ ರಸ್ತೆಯಲ್ಲಿರುವ ವೇದ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಎಸ್ಎಸ್ ಶೆಟ್ಟರ್ ಫೌಂಡೇಷನ್ ವತಿಯಿಂದ ಶಾಲಾ ಮಟ್ಟದ ಎರಡು ದಿನ ಕ್ರೀಡಾಕೂಟ "ಸ್ಕೂಲಿಂಪಿಕ್' ಏರ್ಪಡಿಸಲಾಗಿದೆ.
ಹೊರಾಂಗಣ ಮತ್ತು ಒಳಾಂಗಣ ಕ್ರೀಡೆಗಳು ನಡೆಯಲಿದ್ದು, ನಗರದ 24 ಶಾಲೆಗಳ 300ಕ್ಕೂ ಹೆಚ್ಚು ವಿದ್ಯಾಥಿರ್ಗಳು ಭಾಗವಹಿಸಿದ್ದಾರೆ.
ಕ್ರೀಡಾಪಟು ಡಾ. ಶಾಂತಲಾ ಯೋಗಿ ಅವರು ಪಂದ್ಯಾವಳಿಗೆ ಚಾಲನೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಎಸ್ಎಸ್ ಶೆಟ್ಟರ್ ಫೌಂಡೇಷನ್ ಅಧ್ಯಕ್ಷ ಸಂಕಲ್ಪ ಶೆಟ್ಟರ್ ಅವರು, ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕವಾಗಿ ನಾವೆಲ್ಲರೂ ಆರೋಗ್ಯವಾಗಿ ಇರಬಹುದು. ಮಕ್ಕಳು ಸದೃಢವಾಗಿರಲು ವಿವಿಧ ಶಾಲೆಗಳ ವಿದ್ಯಾಥಿರ್ಗಳಿಗೆ ಈ ಕ್ರೀಡಾಕೂಟ ಏರ್ಪಡಿಸಲಾಗಿದೆ. ಸೋಲು ಗೆಲುವನ್ನು ಮಕ್ಕಳು ಸಹಜವಾಗಿ ತೆಗೆದುಕೊಂಡು ಕ್ರೀಡಾಮನೋಭಾವ ಮೆರೆಯಬೇಕು ಎಂದರು.
ಶ್ರದ್ಧಾ ಅಂಗಡಿ, ಪ್ರಾಂಶುಪಾಲ ಬೀನಾ ಜಾನ್, ಆಕಾಶ ಚೇತ್ರಿ, ಶಾಲೆ ಆಡಳಿತ ಮಂಡಳಿ ಸಿಬ್ಬಂದಿ ಹಾಗೂ ಫೌಂಡೇಷನ್ ಸದಸ್ಯರು ಉಪಸ್ಥಿತರಿದ್ದರು.