ವೇದ ಇಂಟರ್‌ನ್ಯಾಷನಲ್ ಶಾಲೆ ಮಕ್ಕಳ ಸಾಧನೆ

h28-veda school
Published on

ಹುಬ್ಬಳ್ಳಿ: ನಗರದ ಕುಸುಗಲ್ ರಸ್ತೆಯಲ್ಲಿರುವ ವೇದ ಇಂಟರ್‌ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಅಮೋಘ ಸಾಧನೆ ಮಾಡಿದ್ದಾರೆ.

ಗೋಕುಲ್ ರಸ್ತೆಯ ವಾಸವಿ ಮಹಲ್ನಲ್ಲಿ ಗೊಜು ರಿಯೊ ಕರಾಟೆ ದೋ ಕೆನ್ ರಿಯೊ ಕಾನ್ ಟ್ರಸ್ಟ್ ಇಂಡಿಯಾ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಶಾಲೆಯ ವಿದ್ಯಾರ್ಥಿ ದೃವಿತ್ ಎಚ್. ಶಲವಾಡ ಕರಾಟೆಯಲ್ಲಿ ವಿಧವಾದ ಕಾಟಾದಲ್ಲಿ ಪ್ರಥಮ ಹಾಗೂ ಕುಮಿಟೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿನಿ ಪ್ರಾರ್ಥನಾ ಡಿ. ಕಾಟಾ ಹಾಗೂ ಕುಮಿಟೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಂದರ್ಭದಲ್ಲಿ ಶಾಲೆ ಟ್ರಸ್ಟಿ ಶ್ರದ್ಧಾ ಸಂಕಲ್ಪ ಶೆಟ್ಟರ್, ಪ್ರಾಚಾರ್ಯೆ ಬೀನಾ ಜಾನ್, ತರಬೇತುದಾರರಾದ ಉಮರ್ ತರ್ಗರ್ ಹಾಗೂ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net