ವಿಡಿಎಸ್ ಮೈದಾನದಲ್ಲಿ ಶ್ರೀನಿವಾಸವ ಕಲ್ಯಾಣೋತ್ಸವ

2222
Published on

ದತ್ತಾ ಪ್ರಾಪರ್ಟೀಸ್ ವತಿಯಿಂದ ಫೆ.15 ರಂದು ನಗರದ ವಿಡಿಎಸ್ ಮೈದಾನದಲ್ಲಿ ಶ್ರೀನಿವಾಸವ ಕಲ್ಯಾಣೋತ್ಸವ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕಿರಣ್ ಭೂಮಾ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಶ್ರೀನಿವಾಸ ಕಲ್ಯಾಣೋತ್ಸ ಸಮಯದಲ್ಲಿ ದೇವತೆಗಳು ಭೂಮಿಗೆ ಬರುತ್ತಾರೆ ಎಂಬ ನಂಬಿಕೆ ಇದೆ. ಲೋಕ ಕಲ್ಯಾಣಕ್ಕೆ ಈ ಕಲ್ಯಾಣೋತ್ಸ ನಡೆಸಲಾಗುತ್ತದೆ. ಕಾರ್ಯಕ್ರಮಕ್ಕೆ 15 ಸಾವಿರ ಜನರು ಸೇರುವ ನಿರೀಕ್ಷೆ ಇದೆ. ಕಾರ್ಯಕ್ರಮದಲ್ಲಿ ಪುತ್ತೂರು ನರಸಿಂಹ ನಾಯಕ್ ಅವರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

ಶ್ರೀರಾಮುಲು ಕಾರ್ಯಕ್ರಮ ಉದ್ಘಾಟಿಸುವರು. ಸಚಿವ ಎಚ್.ಕೆ. ಪಾಟೀಲ, ಸಿ.ಸಿ. ಪಾಟೀಲ, ಡಾ. ಪ್ರಭಾಕರ ಕೋರೆ, ವಿಜಯ ಸಂಕೇಶ್ವರ, ಮಹಾಂತೇಶ ಕವಟಗಿಮಠ ಉಪಸ್ಥಿತಿ ಇರುವರು ಎಂದು ತಿಳಿಸಿದರು.

ಎಸ್.ಎಚ್. ಶಿವನಗೌಡರ, ಸದಾಶಿವ ಚೆನ್ನಪ್ಪನ್ನರ, ನಾರಾಯಣ ಕುಡತರಕರ, ರಾಘವೇಂದ್ರ, ಜಹೀರ ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net