

ವಿಜಯವಾಣಿ ಸುದ್ದಿಜಾಲ ಗದಗ
ಪ್ರತಿಯೊಂದು ರಂಗದಲ್ಲಿ ಮಹಿಳೆಯರು ಶರವೇಗದಿಂದ ಸಾಧನೆ ಮಾಡುತ್ತಿದ್ದಾರೆ. ಶಾಲಾ ದಿನಗಳಲ್ಲಿ ವಿದ್ಯಾಥಿರ್ನಿಯರು ಗುರಿ ಇಟ್ಟುಕೊಂಡು ಸಾಧನೆ ಮಾಡಬೇಕು. ಜೀವನದಲ್ಲಿ ಮಾರ್ಗದರ್ಶನ ನೀಡಿದ ಗುರುಗಳನ್ನು ಎಂದಿಗೂ ಮರೆಯಬಾರದು ಎಂದು ಸಂಶೋದಕಿ ಡಾ. ವೀಣಾ ಹೇಳಿದರು.
ನಗರದ ವಿಡಿಎಸ್ ಬಾಲಕಿಯರ ಪಪೂ ಕಾಲೇಜಿನಲ್ಲಿ ಗುರುವಾರ ವಿದ್ಯಾಥಿರ್ ಸಂದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ವಿದ್ಯಾಥಿರ್ಗಳು ಇಂದು ಭಾಷೆ, ಬರಹದ ಶುದ್ಧಿ ಮತ್ತು ಕೌಶಲ್ಯಕ್ಕೆ ಹೆಚ್ಚಿನ ಗಮನ ಕೊಡಬೇಕಾಗಿದೆ. ಉತ್ತಮ ಕೌಶಲ್ಯಗಳನ್ನು ರೂಢಿಸಿಕೊಳ್ಳಲು ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ವಿದ್ಯಾಥಿರ್ ಸಂದ ಚಟುವಟಿಕೆಗಳು ಸಹಕಾರಿಯಾಗುತ್ತವೆ. ವಿದ್ಯಾದಾನ ಸಮಿತಿಯಂತಹ ಉತ್ತಮ ಶಿಣ ಸಂಸ್ಥೆಯಲ್ಲಿ ಕಲಿತ ವಿದ್ಯಾಥಿರ್ನಿಯರು ಸಂಸ್ಕಾರ ಮತ್ತು ಸಂಸತಿಯನ್ನು ಬೆಳೆಸಿಕೊಳ್ಳುವುದರೊಂದಿಗೆ ಆಥಿರ್ಕವಾಗಿ ಸಬಲರಾಗಿ ಜೀವನದಲ್ಲಿ ಉತ್ತಮ ವ್ಯಕ್ತಿಗಳಾಗಿ ಹೊರಹೊಮ್ಮಬೇಕು ಎಂದರು.
ಅಧ್ಯಯನದೊಂದಿಗೆ ವಿದ್ಯಾಥಿರ್ನಿಯರು ಪಠ್ಯೇತರ ಚಟುವಟಿಕೆಗಳಲ್ಲಿಯೂ ಕ್ರಿಯಾಶೀಲರಾಗಿ ಪಾಲ್ಗೊಳ್ಳಬೇಕು. ಪದವಿಪೂರ್ವ ಹಂತದಲ್ಲಿಯೇ ಉತ್ತಮ ಗ್ರಹಿಕೆ ಶಕ್ತಿಯನ್ನು ಬೆಳೆಸಿಕೊಂಡು ಚಿಕಿತ್ಸಕ ಬುದ್ದಿ ಮತ್ತು ಸಂಶೋಧನಾತ್ಮಕ ಮನೋಭಾವವನ್ನು ರೂಢಿಸಿಕೊಳ್ಳಬೇಕು ಎಂದು ಡಾ. ವೀಣಾ ತಿಳಿಸಿದರು.
ಡಿ. ಬಿ. ಹುಯಿಲಗೋಳ ಮಾತನಾಡಿ, ಶತಮಾನ ಪೂರೈಸಿದ ವಿದ್ಯಾದಾನ ಸಮಿತಿಯು ಬಾಲಕಿಯರ ಪ್ರೌಢಶಾಲೆ ಮತ್ತು ಪಪೂ ಕಾಲೇಜುಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸುವುದರ ಮೂಲಕ ಮಹಿಳೆಯರ ಸರ್ವಾಂಗೀಣ ವಿಕಾಸ ಮತ್ತು ಆಥಿರ್ಕ ಸಬಲೀಕರಣಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ. ಆಧುನಿಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮತ್ತು ಧಾವಂತದ ಜೀವನದಲ್ಲಿ ವಿದ್ಯಾಥಿರ್ಗಳು ಮಾನವೀಯ ಮೌಲ್ಯ ಮತ್ತು ಕುಶಲ ಕೌಶಲ್ಯ ಬೆಳೆಸಿಕೊಂಡು ಜೀವನದಲ್ಲಿ ಯಶಸ್ಸು ಪಡೆಯಬೇಕೆಂದು ಹೇಳಿದರು.
ವಿದ್ಯಾಥಿರ್ ಸಂದ ಕಾರ್ಯದಶಿರ್ಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಮುಕ್ತಾ ಉಡುಪಿ ಮಾತನಾಡಿದರು. ಪ್ರಥಮ ಪಿಯುಸಿ ಪರೀೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾಥಿರ್ನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಬಿ. ಎಸ್. ರಾಠೋಡ, ದತ್ತಪ್ರಸನ್ನ ಪಾಟೀಲ, ಪ್ರಶಾಂತ ಪಾಟೀಲ, ಬಿ. ಬಿ. ಮಿಜಿರ್, ಹೇಮಂತ ದಳವಾಯಿ, ರೇಖಾ ಕೊಪ್ಪದ, ಉಮರ ಢಲಾಯತ ಇತರರು ಇದ್ದರು.