ವಿಡಿಎಸ್ ಕ್ಲಾಸಿಕ್ ಪ್ರಾಥಮಿಕ ಶಾಲೆಯಲ್ಲಿ ಫ್ಲವರ್ಸ್ ಡೇ ಆಚರಣೆ.

07GDG02
Published on

ಗದಗ:  ಬೆಟಗೇರಿ ಅವಳಿ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ವಿದ್ಯಾದಾನ ಸಮಿತಿ ಕ್ಲಾಸಿಕ್ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ಲಾವರ್ಸ್ ಡೇ ಆಚರಿಸಲಾಯಿತು.

ಶಾಲೆಯ ನರ್ಸರಿ, ಎಲ್ ಕೆ ಜಿ ಮತ್ತು ಯುಕೆಜಿ ವಿದ್ಯಾರ್ಥಿಗಳು ತಮಗೆ ತಿಳಿದ ವಿವಿಧ ಬಗೆಯ ಹೂಗಳನ್ನು ತೆಗೆದುಕೊಂಡು ಬಂದು, ಶಿಕ್ಷಕರ ಮಾರ್ಗದರ್ಶನದಂತೆ ಹೂಗಳಿಂದ ವಿವಿಧ ಕಲಾ ಕೃತಿಗಳನ್ನು, ಪ್ರಾಣಿ ಪಕ್ಷಿಗಳನ್ನು ಹಾಗೂ ರಂಗೋಲಿಯನ್ನು ತಯಾರಿಸಿ, ಜೊತೆಗೆ ತಾವು ಕೂಡ ವಿವಿಧ ಹೂಗಳ ವೇಷಭೂಷಣವನ್ನು ತೊಟ್ಟು ಶಾಲಾ ವಾತಾವರಣವನ್ನು ಮಕರಂದಗೊಳಿಸಿದ್ದರು. ಅತಿ ಹೆಚ್ಚು ಹೂಗಳನ್ನು ಹಾಗೂ  ಬೇಡಿಕೆ ಇರುವ ಹೂಗಳನ್ನು ತೆಗೆದುಕೊಂಡು ಬಂದು ಸುಂದರವಾದ ಕಲಾ ಕೃತಿಗಳನ್ನು ರಚಿಸಿದ ವಿದ್ಯಾರ್ಥಿಗಳಿಗೆ ತರಗತಿವಾರು ಬಹುಮಾನ ನೀಡಲಾಯಿತು.

ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಂ. ಆರ್. ಡೊಳ್ಳಿನ ರವರು ಮಕ್ಕಳ ಮನಸ್ಸು ಹೂವಿನ ಹಾಗೆ ಇರುತ್ತದೆ,  ಅದು ಇಡೀ ಸಮಾಜಕ್ಕೆ ಸುವಾಸನೆ ಬೀರಲು ಶಿಕ್ಷಕರ ಮಾರ್ಗದರ್ಶನವೇ ಕಾರಣ. ಇಂತಹ ಆಚರಣೆಗಳಿಂದ ಮಕ್ಕಳಿಗೆ ವಿವಿಧ ಬಗೆಯ ಹೂಗಳ ಪರಿಚಯ, ಸ್ಪರ್ಧಾ ಮನೋಭಾವನೆ, ಸೃಜನಶೀಲತೆ ಹಾಗೂ ಉತ್ತಮವಾದ ಕಲಾಶಕ್ತಿಯು ಬೆಳೆಯುತ್ತದೆ ಎಂದು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಹೂಗಳಿಂದ ತಯಾರಿಸಿದ ಕುಸುಮ ಕಲಾಕೃತಿಗಳ ಸ್ಪರ್ಧೆಯ ನಿರ್ಣಾಯಕರಾಗಿ ಶಾಲೆಯ ಶಿಕ್ಷಕಿಯರಾದ  ಶ್ರೀಮತಿ ರೇಣುಕಾ ವೆಂಕಟಾಪುರ ರವರು ಉತ್ತಮವಾದ ಫಲಿತಾಂಶ ನೀಡಿ, ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಿ ಸತ್ಕರಿಸುವುದರ ಮೂಲಕ ಮಕ್ಕಳ ಕಲಾಶೀಲತೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದ ಶಾಲೆಯ ಶಿಕ್ಷಕಿಯರಾದ ಶ್ರೀಮತಿ ಪಾರ್ವತಿ ಕಟ್ಟಿಮನಿ ಹಾಗೂ ಶ್ರೀಮತಿ ವೀಣಾ ಹುಬ್ಬಳ್ಳಿ ಇವರಿಗೆ ಮುಖ್ಯೋಪಾಧ್ಯಾಯರಾದ ಶ್ರೀ ಎಂ. ಆರ್. ಡೊಳ್ಳಿನ ರವರು ಅಭಿನಂದಿಸಿ, ಸತ್ಕರಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಸಮಸ್ತ ಶಿಕ್ಷಕ/ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಹಾಗೂ ಪಾಲಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net