ವಿಡಿಎಸ್ ಕ್ಲಾಸಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ.

1705560004313
Published on

ಗದಗ: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ವಿದ್ಯಾದಾನ ಸಮಿತಿ ಕ್ಲಾಸಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚಿಗೆ 2023-24 ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ಜರಗಿತು.

ನಗರದ ಮುಷ್ಟಿ ಕರಾಟೆ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ವರಲಕ್ಷ್ಮಿ ಹೊಂಬಾಳಿ,  ವಿದ್ಯಾದಾನ  ಸಮಿತಿಯ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಹುಯಿಲಗೋಳ, ಆಡಳಿತಾಧಿಕಾರಿಗಳಾದ ಡಾ. ಗಂಗೂಬಾಯಿ ಪವಾರ ಹಾಗೂ ಸಿ ಆರ್ ಪಿ ಗಳಾದ ಶ್ರೀ ರವಿ ಹೆಬ್ಬಳ್ಳಿ ರವರು ವಿದ್ಯಾರ್ಥಿಗಳ ಪಥಸಂಚಲನದ ಗೌರವವನ್ನು ಸ್ವೀಕರಿಸಿದರು. ಕ್ರೀಡಾ ಜ್ಯೋತಿಯು ವಿದ್ಯಾದಾನ ಸಮಿತಿಯ ಮೈದಾನದಿಂದ ಹೊರಟು ಕಾರ್ಯಕ್ರಮದ ವೇದಿಕೆಯನ್ನು ತಲುಪಿತು. ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಹುಯಿಲಗೋಳ , ವರಲಕ್ಷ್ಮಿ ಹೊಂಬಾಳಿ, ಡಾ. ಗಂಗೂಬಾಯಿ ಪವಾರ ರವರು ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿ, ಸಸಿಗೆ ನೀರು ಎರೆಯುವುದರ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿದರು. 

ಶ್ರೀಮತಿ ವರಲಕ್ಷ್ಮಿ ಹೊಂಬಾಳಿ ರವರು  ಕ್ರೀಡೆಯಿಂದ ಶಿಸ್ತನ್ನು ಮೈಗೂಡಿಸಿಕೊಂಡಾಗ ಯಾವುದೇ ಸಾಧನೆ ಮಾಡಲು ಸಾಧ್ಯ,  ವಿದ್ಯಾದಾನ ಸಮಿತಿಯ ಶಾಲೆಗಳು ಕ್ರೀಡೆಗೆ, ಶಿಸ್ತಿಗೆ ಮತ್ತು ಸಾಧನೆಗೆ ಹೆಸರಾಗಿದೆ. ನಮ್ಮ ಮನಸ್ಸು ಸದೃಢವಾಗಬೇಕಾದರೆ ದೈಹಿಕವಾಗಿ ಸದೃಢವಾದಾಗ ಮಾತ್ರ ಸಾಧ್ಯ. ದೈಹಿಕ ಕ್ರೀಡೆಗಳನ್ನು ಆಡುವುದರಿಂದ ಮನಸ್ಸು ಮತ್ತು ದೇಹವನ್ನು ಗಟ್ಟಿಯಾಗಿಸಿಕೊಳ್ಳಬಹುದು, ಎಷ್ಟೇ ಶ್ರೀಮಂತರಿದ್ದರು ಆರೋಗ್ಯದ ಮುಂದೆ ಎಲ್ಲವೂ ಶೂನ್ಯ. ದಿನಾಲು ಬೆಳಗ್ಗೆ ಯೋಗ, ವ್ಯಾಯಾಮ ಮಾಡುವುದರಿಂದ ಆರೋಗ್ಯವನ್ನು   ಕಾಪಾಡಿಕೊಳ್ಳಬೇಕೆಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳಿಗೆ ಸಲಹೇ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ  ಹುಯಿಲಗೋಳ ರವರು ಮಕ್ಕಳು ಪಾಠದ ಜೊತೆಗೆ ಹೆಚ್ಚಾಗಿ ಕ್ರೀಡೆಗಳಲ್ಲಿ ಆಸಕ್ತಿ ತೋರಬೇಕು. ಮೊಬೈಲ್, ದೂರದರ್ಶನಗಳಿಗೆ ದಾಸರಾಗದೆ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಶಾಲೆಯ, ಊರಿನ ಹಾಗೂ  ಪಾಲಕರ ಹೆಸರು ತರುವಂತಹ  ಮಕ್ಕಳಾಗಬೇಕೆಂದು ಹೇಳಿದರು. ಕ್ರೀಡೆ ದೇಹಕ್ಕೆ ಮತ್ತು ಮನಸ್ಸಿಗೆ ಖುಷಿ ಕೊಡುವುದರ ಜೊತೆಗೆ ಜೀವನದ ಮೌಲ್ಯಗಳನ್ನು ಕಲಿಸಿಕೊಡುತ್ತದೆ. ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸಿ ಬದುಕಿಗೆ ಶಕ್ತಿ ತುಂಬಿ ಕೊಡುತ್ತದೆ ಎಂದು ತಮ್ಮ ಅಧ್ಯಕ್ಷೀಯ  ನುಡಿಗಳಲ್ಲಿ ತಿಳಿಸಿದರು.

ಕ್ಲಸ್ಟರ್ ಸಂಖ್ಯೆ 4 ರ ಸಿಆರ್‌ಪಿಗಳಾದ ಶ್ರೀ ರವಿ ಹೆಬ್ಬಳ್ಳಿ ರವರು ಶಾಲೆಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸದ  ಜೊತೆಯಲ್ಲಿ ಆರೋಗ್ಯದ ದೃಷ್ಟಿಯಿಂದ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದು ತುಂಬಾ ಮುಖ್ಯವಾಗಿದ್ದು. ಪೋಷಕರು ಹಾಗೂ ಶಾಲಾ ಶಿಕ್ಷಕರು ಮಕ್ಕಳಿಗೆ ವಿದ್ಯೆಯ ಜೊತೆಯಲ್ಲಿ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವುದು ಅವಶ್ಯವಾಗಿದೆ.  ಈ ನಿಟ್ಟಿನಲ್ಲಿ ಶಿಕ್ಷಕರು ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಶಿಕ್ಷಕರಿಗೆ ಕರೆ ನೀಡಿದರು.

ಆಡಳಿತಾಧಿಕಾರಿಗಳಾದ ಡಾ. ಗಂಗೂಬಾಯಿ ಪವಾರ ರವರು ಮಕ್ಕಳಿಗೆ ಶುಭ ಹಾರೈಸುವುದರ ಜೊತೆಗೆ ಅಭಿನಂದನೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಷ್ಟಿ ಕರಾಟಿಯ ಮುಖ್ಯ ಕೋಚ್ ಶ್ರೀ ಬಸವರಾಜ ಹೊಂಬಾಳಿ ರವರು ನಮ್ಮ ಕರಾಟೆ ಸಂಸ್ಥೆಯಲ್ಲಿ ಶಾಲಾ ಮಕ್ಕಳಿಗೆ ರೈಫಲ್ ತರಬೇತಿ, ಕರಾಟೆ ತರಬೇತಿ, ಶೂಟಿಂಗ್ ಹಾಗೂ ಮುಂತಾದ ತರಬೇತಿಗಳನ್ನು ನೀಡಲಾಗುತ್ತಿದೆ ವಿದ್ಯಾರ್ಥಿಗಳು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಪೋಷಕರ ಪ್ರಕಟಣೆಗಾಗಿ  ತಿಳಿಸಿದರು.

ಶಾಲೆಯ ದೈಹಿಕ ಶಿಕ್ಷಕರಾದ ಶ್ರೀ ರಮೇಶ ಲಮಾಣಿ ರವರು ಮಕ್ಕಳಿಗೆ ಕ್ರೀಡಾ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಇನ್ನೋರ್ವ ದೈಹಿಕ ಶಿಕ್ಷಕರಾದ ಶ್ರೀ ಪಿ. ಜಿ. ನಾಯಕ ರವರು ಕ್ರೀಡಾಕೂಟದಲ್ಲಿರುವ ಕ್ರೀಡೆಗಳ ವಿಧಗಳು ಹಾಗೂ ಅವುಗಳ ನೀತಿ ನಿಯಮಗಳ ಕುರಿತು ಮಕ್ಕಳಿಗೆ ತಿಳಿಸಿದರು.

ಕು.  ಸಾನ್ವಿ ಸೋಮಣ್ಣವರ ಹಾಗೂ ಸಂಗಡಿಗರು ಪ್ರಾರ್ಥನೆಗೈದರು. ಶಾಲೆಯ ಶಿಕ್ಷಕಿಯರಾದ ಕು. ಗಾಯಿತ್ರಿ  ಅಸುಂಡಿ ನಿರೂಪಿಸಿದರು, ಶ್ರೀಮತಿ ಪಾರ್ವತಿ ಕಟ್ಟಿಮನಿ ಸ್ವಾಗತಿಸಿದರು,  ಶ್ರೀಮತಿ ಶ್ವೇತಾ ಮೇಲಗಿರಿ ವಂದಿಸಿದರು.  ಕಾರ್ಯಕ್ರಮದಲ್ಲಿ ಶಾಲೆಯ ನಿರ್ದೇಶಕರಾದ ಶ್ರೀ ಪ್ರತೀಕ ಎಸ್. ಹುಯಿಲಗೋಳ, ಮುಖ್ಯೋಪಾಧ್ಯರಾದ ಶ್ರೀ ಎಂ. ಆರ್. ಡೊಳ್ಳಿನ, ಶ್ರೀ ಎಂ. ವಿ. ಹವಲ್ದಾರ, ಸುಮಂಗಲಾ ಆಸಂಗಿ, ವೀಣಾ ನಾಯಕ, ವೀಣಾ ಹುಬ್ಬಳ್ಳಿ, ಕ್ರೀಡಾಮಂತ್ರಿ ಕು. ಶ್ರೇಯಾ ತಿಪ್ಪನ್ನವರ್, ಶಾಲೆಯ ಸಮಸ್ತ ಶಿಕ್ಷಕ/ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net