ಕಾಮಿರ್ಕರ ಶ್ರದ್ಧೆ ಪ್ರಾಮಾಣಿಕತೆಗೆ ಬೆಲೆ ಕಟ್ಟಲಾಗದು: ಡಿ. ಬಿ. ಹುಯಿಲಗೋಳ

04GDG06
Published on

ಗದಗ: ಜೀವನ ನಿರ್ವಹಣೆಗಾಗಿ ನಿತ್ಯ ಕಷ್ಟಪಟ್ಟು ಶ್ರಮವಹಿಸಿ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವ ಕಾಮಿರ್ಕರ ಶ್ರದ್ಧೆ, ಪ್ರಾಮಾಣಿಕತೆಗೆ ಬೆಲೆ ಕಟ್ಟಲಾಗದು ಎಂದು ಧೀರೇಂದ್ರ ಹುಯಿಲಗೋಳ ಹೇಳಿದರು.
ಜಿಲ್ಲಾ ಕಾಮಿರ್ಕ ಕಲ್ಯಾಣ ಸಂಸ್ಥೆ ವಿದ್ಯಾದಾನ ಸಮಿತಿ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದ ಅವರು, ಶತಮಾನ ಪೂರೈಸಿರುವ ವಿದ್ಯಾದಾನ ಸಮಿತಿಯ ಶೈಣಿಕ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ವಿದ್ಯಾದಾನ ಸಮಿತಿಗೆ ನೀಡಿರುವುದು ಸಂತಸ ತಂದಿದೆ. ವಿದ್ಯಾದಾನ ಸಮಿತಿ ನೂರು ವರ್ಷಗಳ ಕಾಲ ವಿದ್ಯೆಯನ್ನು ನೀಡುತ್ತಾ ಬಂದಿದ್ದು, ಸಂಸ್ಥೆಯಲ್ಲಿ ಶಿಣ ಪಡೆದಿರುವ ಲಾಂತರ ವಿದ್ಯಾಥಿರ್ಗಳು ಈಗ ದೇಶ ವಿದೇಶಗಳಲ್ಲಿ ಉನ್ನತ ಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ವಿದ್ಯಾದಾನ ಸಮಿತಿ ಶ್ರೀನಿವಾಸ ಹುಯಿಲಗೋಳ ಮಾತನಾಡಿದರು. ಭೀಮಪ್ಪ ಪೂಜಾರ, ಎಸ್​. ಪಿ. ಕರಿಸೋಮನಗೌಡರ, ದುರಗಪ್ಪ ಗುಡಿಮನಿ, ಶಂಕರ ಗುರುಬಸಣ್ಣವರ, ಎಂ. ಎ. ಹರ್ಲಾಪೂರ, ಮಹೇಶ ಜುಬೇರ, ರಮೇಶ ವಾಲ್ಮೀಕಿ, ಪ್ರಭಯ್ಯ ಹಿರೇಮಠ, ಡಿ. ಬೇಲೇರಿ ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net