ವಿಡಿಎಸ್ ಕ್ಲಾಸಿಕ್ ಶಾಲೆಯಲ್ಲಿ ಹಿಂದಿ ದಿವಸ್ ಆಚರಣೆ

15GDG06
Published on

ಗದಗ: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿ ಕ್ಲಾಸಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಷ್ಟ್ರೀಯ ಹಿಂದಿ ದಿವಸ್ ಆಚರಿಸಲಾಯಿತು.

ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಂ. ಆರ್. ಡೊಳ್ಳಿನ ರವರು ಭಾರತವು ಅನೇಕ ಭಾಷೆಗಳು ಹಾಗೂ ಲಿಪಿಗಳನ್ನು ಹೊಂದಿರುವ ಶ್ರೀಮಂತ ದೇಶವಾಗಿದೆ. ಇಲ್ಲಿ ಅನೇಕ ಭಾಷೆಗಳನ್ನು ಮಾತನಾಡಲಾಗುತ್ತದೆ, ಅದರಲ್ಲೂ ಹಿಂದಿ ಭಾಷೆಯನ್ನು ದೇಶದ ಅರ್ಧಕ್ಕಿಂತ ಹೆಚ್ಚು ಭಾಗದಲ್ಲಿ ಮಾತನಾಡಲಾಗುತ್ತದೆ. ಭಾರತದಲ್ಲಿ ಹಿಂದಿಗೆ ರಾಷ್ಟ್ರೀಯ ಭಾಷೆಯ ಸ್ಥಾನಮಾನ ದೊರೆತಿಲ್ಲವಾದರೂ ರಾಷ್ಟ್ರದ ಅಧಿಕೃತ ಭಾಷೆಯಾಗಿ ಹಿಂದಿಗೆ ವಿಶೇಷ ಸ್ಥಾನ ನೀಡಲಾಗಿದೆ. ಹಿಂದಿ ಭಾಷೆ ಭಾರತೀಯರನ್ನು ಮತ್ತು ವಿದೇಶದಲ್ಲಿ ವಾಸಿಸುವ ಭಾರತೀಯರನ್ನು ಒಂದುಗೂಡಿಸುತ್ತದೆ. ಹಿಂದಿ ಭಾಷೆಯು ಭಾರತದ ಅಸ್ಮಿತೆ ಮತ್ತು ಹೆಮ್ಮೆ ಎರಡು ಆಗಿದೆ ಹಿಂದಿ ಭಾಷೆಯನ್ನು ಬಳಸುವ ಮೂಲಕ ವಿಶ್ವದ ಎಲ್ಲಾ ದೇಶಗಳಲ್ಲಿ ವಾಸಿಸುವ ಭಾರತೀಯರನ್ನು ಒಂದುಗೂಡಿಸಲು ಪ್ರತಿ ವರ್ಷ ರಾಷ್ಟ್ರೀಯ ಹಿಂದಿ ದಿನವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು. 

ಶಾಲೆಯ ಹಿಂದಿ ಭಾಷೆಯ ಶಿಕ್ಷಕಿಯರಾದ ಶ್ರೀಮತಿ ಎ. ಎಚ್. ಬಾಗಲಕೋಟೆ ರವರು ರಾಷ್ಟ್ರೀಯ ಹಿಂದಿ ದಿನ ಆಚರಿಸುವ ಇತಿಹಾಸ ಮತ್ತು ಹಿಂದಿ ಭಾಷೆಯ ಮಹತ್ವ ಕುರಿತು ಮಕ್ಕಳಿಗೆ ತಿಳಿಸಿದರು. ರಾಷ್ಟ್ರೀಯ ಹಿಂದಿ ದಿವಸ್ ಅಂಗವಾಗಿ ವಿದ್ಯಾರ್ಥಿಗಳಿಗೆ ಹಿಂದಿ ಭಾಷೆಯ ಮಹತ್ವವುಳ್ಳ ಕುರಿತು ಚಿತ್ರಕಲೆ ಬಿಡಿಸುವುದು,  ಹಾಡುಗಳನ್ನು ಹಾಡುವುದು ಹಾಗೂ ಭಾಷಣ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಾದ ವಿದ್ಯಾರ್ಥಿಗಳಾದ ತೇಜಸ್ವಿನಿ ಬಾಗಾಡೆ, ಚೇತನಗೌಡ ಎನ್, ಸಿಂಚನಾ ಬ್ಯಾಳಿ, ವಿಜಯಶ್ರೀ ಎಚ್, ರಮ್ಯಾ ಬಡಿಗೇರ, ಹೋರಿಯಾ ಫಾಹಿಮ್ ಕಪಾಲಿ,  ಮಹ್ನದ್ ಪೈಝಲ್ ಕೊಟ್ಟೂರ, ಶ್ರದ್ಧಾ ಮುರಶಿಳ್ಳಿನ ಹಾಗೂ ವಾಣಿ ಡೊಳ್ಳಿನ, ಫಾತಿಮಾ ಜುನೈರ್ಹ ಸಂಗಂಕರ್,  ಶ್ರೇಯಾ ತಿಪ್ಪನ್ನವರ ಹಾಗೂ  ಪ್ರಾಚೀ ಗುಳಸ್ಕರ್  ಇವರನ್ನು ವೇದಿಕೆಯ ಮೇಲೆ ಆಹ್ವಾನಿಸಿ ಪ್ರಶಂಸೆ ವ್ಯಕ್ತಪಡಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಸಮಸ್ತ ಶಿಕ್ಷಕ/ಶಿಕ್ಷಕಿಯರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net