ವಿಡಿಸಿಸಿ ಬ್ಯಾಂಕ್​ ನೌಕರರ ಕ್ರೀಡಾಕೂಟಕ್ಕೆ ಚಾಲನೆ

mm 23-13
Published on

ವಿಜಯಪುರ : ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನೌಕರರ ಗಜಾನನ ಉತ್ಸವ ಮಂಡಳಿಯಿಂದ ಗಣೇಶ ಚತುರ್ಥಿ ಅಂಗವಾಗಿ ಕ್ರೀಡಾಕೂಟ ನಡೆಯಿತು.

ನಗರದ ರೂಪಾದೇವಿ ಶಾಲಾ ಆವರಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕ್ರೀಡಾಕೂಟಕ್ಕೆ ಸಹಕಾರಿ ಬ್ಯಾಂಕಿನ ಉಪಾಧ್ಯ ರಾಜಶೇಖರ ಗುಡದಿನ್ನಿ ಚಾಲನೆ ಹಾಗೂ ನಿರ್ದೇಶಕ ಜಿ.ಬಿ. ನಿಡೋಣಿ ಕ್ರಿಕೆಟ್​ ಪಂದ್ಯದ ಟಾಸ್​ ಮಾಡುವ ಮೂಲಕ ಚಾಲನೆ ನೀಡಿದರು. ಬ್ಯಾಂಕಿನ ಸಿಇಒ ಎಸ್​.ಎ. ಢವಳಗಿ ಕ್ರೀಡಾ ಸಾಮಗ್ರಿ ಬಿಡುಗಡೆ ಮಾಡಿದರು.

ನಿರ್ದೇಶಕ ಹನುಮಂತ್ರಾಯಗೌಡ ಪಾಟೀಲ ಕ್ರೀಡಾಪಟುಗಳಿಗೆ ಪುಷ್ಪ ಗುಚ್ಚ ನೀಡಿ ಶುಭ ಹಾರೈಸಿದರು.

ಬ್ಯಾಂಕಿನ ಉಪ ಪ್ರಧಾನ ವ್ಯವಸ್ಥಾಪಕ ಸತೀಶ ಪಾಟೀಲ, ಪಿ.ವೈ. ಡೆಂಗಿ, ಎಂ.ಜಿ. ಬಿರಾದಾರ, ಎಂ.ಎಚ್​. ಹಟ್ಟಿ, ಎಂ.ಎಸ್​. ದೇಸಾಯಿ, ಎಸ್​.ಬಿ. ಹೊಸಮನಿ, ಬಿ.ಎಸ್​.ಪಾಟೀಲ, ಐ.ಎಸ್​. ಸಂಖ ಮತ್ತಿತರರಿದ್ದರು.

ಆರ್​.ಪಿ. ಪವಾರ ಸ್ವಾಗತಿಸಿದರು. ಸಂತೋಷ ಮಾನಕರ ವಂದಿಸಿದರು.

ವಿಜಯಪುರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನೌಕರರ ಕ್ರೀಡಾಕೂಟಕ್ಕೆ ಗಣ್ಯರು ಚಾಲನೆ ನೀಡಿದರು. ಸತೀಶ ಪಾಟೀಲ, ರಾಜಶೇಖರ ಗುಡದಿನ್ನಿ, ಜಿ.ಬಿ. ನಿಡೋಣಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net