ಭಾರತೀಯ ಸಂಸ್ಕೃತಿ ಪ್ರತೀಕ

PTR_21 JUN_10
Published on


ಪುತ್ತೂರು: ಯೋಗವು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದು, ಇದರ ಹುಟ್ಟು ಪ್ರಾಚೀನ ಭಾರತದಲ್ಲಿ ನಡೆದಿದೆ. ಜೂನ್ ೨೧ರಂದು ವರ್ಷದ ಅತೀ ದೀರ್ಘ ಅವಽಯ ಹಗಲು ಇರುವುದರಿಂದ ಅದೇ ದಿನ ಯೋಗ ದಿನವನ್ನು ಆಚರಿಸಲಾಗುತ್ತದೆ. ಯೋಗವು ನಮ್ಮ ಶರೀರದಲ್ಲಿ ಚೈತನ್ಯ ತುಂಬಿ ಹುರುಪನ್ನು ನೀಡುತ್ತದೆ ಎಂದು ವಿವೇಕಾನಂದ ಮಹಾವಿದ್ಯಾಲಯದ ದೈಹಿಕ ನಿರ್ದೇಶಕ ರವಿಶಂಕರ್ ವಿ.ಎಸ್. ಹೇಳಿದರು.


ಅವರು ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ವಿವೇಕಾನಂದ ಪದವಿಪೂರ್ವ ಕಾಲೇಜು ವೈದೇಹಿ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.


ಕಾಲೇಜಿನ ಉಪಪ್ರಾಂಶುಪಾಲ ದೇವಿಚರಣ್ ರೈ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಆವರಣದಲ್ಲಿ ೪೦೦ಕ್ಕೂ ಅಽಕ ವಿದ್ಯಾರ್ಥಿಗಳು ಯೋಗ ಶಿಕ್ಷಕಿ ಶರಾವತಿ ನೇತೃತ್ವದಲ್ಲಿ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಉಪನ್ಯಾಸಕಿ ದಿವ್ಯ.ಜಿ. ಸ್ವಾಗತಿಸಿ,ನಿರೂಪಿಸಿದರು. ದೈಹಿಕ ನಿರ್ದೇಶಕಿ ಡಾ.ಜ್ಯೋತಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net