ಪುತ್ತೂರಿನಲ್ಲಿ ರಾಷ್ಟ್ರಮಟ್ಟದ ವಾಲಿಬಾಲ್ ಟೂರ್ನಿ - ೧೬ರಿಂದ ೧೯ರವರೆಗೆ ಪಂದ್ಯಾಟ - ೭೦೦ ಸ್ಪರ್ಧಾಳುಗಳು, ೬ ಅಂಗಣ

WhatsApp Image 2024-10-14 at 15.34.28_add40fbe
Published on

ಪುತ್ತೂರು: ತೆಂಕಿಲ ವಿವೇಕಾನಂದ ಅಂಗ್ಲ ಮಾಧ್ಯಮ ಶಾಲೆ ಕ್ಯಾಂಪಸ್‌ನಲ್ಲಿ ರಾಷ್ಟ್ರಮಟ್ಟದ ವಾಲಿಬಾಲ್ ಟೂರ್ನಿ ಅ.೧೬ ರಿಂದ ೧೯ರವರೆಗೆ ನಡೆಯಲಿದೆ. ದೇಶದ ೧೧ ಕ್ಷೇತ್ರಗಳಲ್ಲಿ ಬಾಲ, ಕಿಶೋರ, ತರುಣ ವರ್ಗದಲ್ಲಿ ಸುಮಾರು ೭೦೦ ಸ್ಪರ್ಧಾಳುಗಳು, ೧೦೦ ಮಂದಿ ಅಽಕಾರಿಗಳು ಭಾಗವಹಿಸಲಿದ್ದಾರೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಹೇಳಿದರು.

ಅಖಿಲ ಭಾರತೀಯ ಶೈಕ್ಷಣಿಕ ಸಂಘಟನೆ ವಿದ್ಯಾಭಾರತಿ ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ಮರುನಿರ್ಮಾಣದ ಚಿಂತನೆ ಹೊಂದಿದೆ. ದೇಶಾದ್ಯಂತದ ಸುಮಾರು ೨೫ ಸಾವಿರ ಶಾಲೆಗಳಿದ್ದು, ೩೫ ಲಕ್ಷ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಸುಮಾರು ೨೬ ಕ್ರೀಡೆಗಳನ್ನು ವಿದ್ಯಾಭಾರತಿ ಹಮ್ಮಿಕೊಂಡು ಬರುತ್ತಿದ್ದು, ಒಂದು ಕ್ರೀಡೆಯನ್ನು ನಡೆಸುವ ಅವಕಾಶ ವಿವೇಕಾನಂದಕ್ಕೆ ಲಭಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈಗಾಗಲೇ ೬ ಕ್ರೀಡಾಂಗಣಗಳನ್ನು ನಿರ್ಮಿಸಲಾಗಿದೆ. ೨ ಕ್ರೀಡಾಂಗಣಗಳಿಗೆ ಹೊನಲು ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಅ.೧೬ರಂದು ೩ ಗಂಟೆಗೆ ದರ್ಭೆ ವೃತ್ತದಿಂದ ಶಾಲಾ ಮೈದಾನದವರೆಗೆ ಜಾಥಾ ನಡೆಯಲಿದೆ. ಸಂಜೆ ೬ಕ್ಕೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಪಂದ್ಯಕೂಟ ಉದ್ಘಾಟಿಸಲಿದ್ದಾರೆ. ವಿದ್ಯಾಭಾರತಿ ಕರ್ನಾಟಕ ಅಧ್ಯಕ್ಷ ಪರಮೇಶ್ವರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಅ.೧೭ ಮತ್ತು ೧೮ರಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ೧೯ರಂದು ಮಧ್ಯಾಹ್ನ ೩.೩೦ರಿಂದ ಸಮಾರೋಪ ನಡೆಯಲಿದೆ ಎಂದರು.


ವಿದ್ಯಾಭಾರತಿ ದಕ್ಷಿಣ ಮಧ್ಯ ಕ್ಷೇತ್ರೀಯ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಪ್ರಮುಖ್ ಮಂಕುಡೆ ವೆಂಕಟ್ರಮಣ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಶಿವಪ್ರಕಾಶ್, ವಿದ್ಯಾಭಾರತಿ ಖೇಲ್‌ಖೂದ್ ಪ್ರಮುಖ್ ಕರುಣಾಕರ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯಶಿಕ್ಷಕ ಸತೀಶ್ ರೈ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net